Home Crime ಕುಂದಾಪುರ : ಅಂದರ್ ಬಾಹರ್ ಜುಗಾರಿ‌ ಆಟ : ನಾಲ್ಕು ಮಂದಿ‌ ವಶಕ್ಕೆ….!!

ಕುಂದಾಪುರ : ಅಂದರ್ ಬಾಹರ್ ಜುಗಾರಿ‌ ಆಟ : ನಾಲ್ಕು ಮಂದಿ‌ ವಶಕ್ಕೆ….!!

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಮದ್ದುಗುಡ್ಡೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ‌ ಆಟ ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಮಿಥುನ್ ಖಾರ್ವಿ, ಚಂದ್ರ ಪೂಜಾರಿ, ರೆಹಮತ್, ನಿರಂಜನ್ ನಾಯಕ್ ಎಂದು ಗುರುತಿಸಲಾಗಿದೆ.

ಕುಂದಾಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ : ದಿನಾಂಕ 12/10/2025 ರಂದು 23:30 ಗಂಟೆಗೆ ಕುಂದಾಪುರ ಕಸಬಾ ಗ್ರಾಮದ ಮದ್ದುಗುಡ್ಡೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆಂದು ದೊರೆತ ಮಾಹಿತಿಯಂತೆ ಪಿರ್ಯಾದಿ ನಂಜಾನಾಯ್ಕ ಎನ್, ಪೊಲೀಸ್‌ ಉಪನಿರೀಕ್ಷಕರು, ಕುಂದಾಪುರ ಪೊಲೀಸ್ ಠಾಣೆ ಇವರು ಠಾಣಾ ಸಿಬ್ಬಂದಿಯವರೊಂದಿಗೆ 23:50 ಗಂಟೆಗೆ ಸ್ಥಳಕ್ಕೆ ಹೋಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 00:05 ಗಂಟೆಗೆ ಸುತ್ತುವರಿದು ದಾಳಿ ಮಾಡಲು ಹೋದಾಗ ಅವರುಗಳು ಓಡಿ ಹೋಗಲು ಪ್ರಯತ್ನಿಸಿದ್ದು ಅವರುಗಳಲ್ಲಿ ಆರೋಪಿ 1) ಮಿಥುನ ಖಾರ್ವಿ(35), ತಂದೆ: ಈಶ್ವರ ಖಾರ್ವಿ ವಾಸ: ಪಾರ್ವತಿ ನಿಲಯ, ಕಲ್ಯಾಣ ಸ್ವಾಮಿ ರಸ್ತೆ, ಕುಂದಾಪುರ ಕಸಬಾ ಗ್ರಾಮ ಕುಂದಾಪುರ ತಾಲೂಕು ಉಡುಪಿ, 2) ಚಂದ್ರ ಪೂಜಾರಿ(45), ತಂದೆ: ದಿ.ಕೃಷ್ಣ ಪೂಜಾರಿ ವಾಸ: ಸಿದ್ದನಾಯಕನ ರಸ್ತೆ ಕಸಬ ಗ್ರಾಮ ಕುಂದಾಪುರ ತಾಲೂಕು ಉಡುಪಿ, 3) ರೆಹಮತ್‌(51) ವರ್ಷ ತಂದೆ: ದಿ.ಮಹಮ್ಮದ್‌ ಗೌಸ್‌ ವಾಸ: ರೋಯಲ್‌ ಸಭಾ ಭವನದ ಹಿಂಭಾಗ ಚಿಕನ್‌ ಸಾಲ್‌ ರಸ್ತೆ ಕಸಬ ಗ್ರಾಮ ಕುಂದಾಪುರ ತಾಲೂಕು ಉಡುಪಿ, 4) ನಿರಂಜನ್‌ ನಾಯಕ್‌ (39) ವರ್ಷ ತಂದೆ: ಕೇಶವ ನಾಯಕ್‌ ವಾಸ: ಮನೆ, ಮದ್ದುಗುಡ್ಡೆ ಕುಂದಾಪುರ ಕಸಬಾ ಗ್ರಾಮ ಕುಂದಾಪುರ ತಾಲೂಕು ಉಡುಪಿ ಇವರುಗಳನ್ನು ವಶಕ್ಕೆ ಪಡೆಡುಕೊಂಡು, ಸ್ಥಳದಲ್ಲಿ ಅಂದರ್‌ ಬಾಹರ್‌ ಜುಗಾರಿ ಆಟಕ್ಕೆ ಉಪಯೋಗಿಸಿದ 1) ಬಿಳಿ ಬಣ್ಣದ ಪಾಲೀಥಿನ್ ಚೀಲ-1, 2) ಡೈಮಾನ್‌, ಆಟಿನ್‌, ಇಸ್ಪೀಟ್‌ ಕಳವಾರ್‌ ಚಿತ್ರಗಳಿರುವ 52 ಇಸ್ಪೀಟ್‌ ಎಲೆಗಳು 3) ನಗದು ರೂ 2660/- ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಉಳಿದ ಓಡಿ ಹೋದ ಆಪಾದಿತರ ಬಗ್ಗೆ ವಿಚಾರಿಸಲಾಗಿ ಕಿರಣ, ಹರೀಶ್‌, ಮಂಜುನಾಥ ಎಂಬುದಾಗಿ ತಿಳಿದು ಬಂದಿರುತ್ತದೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 131/2025 ಕಲಂ: 87 KP ACT ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.