Home Karavali Karnataka ವಿದ್ಯಾರ್ಥಿ ನಾಯಕ ಕ್ರಿಸ್ಟನ್ ಮಿನೇಜಸ್ ರವರು MLC ಶ್ರೀ ಐವನ್ ಡಿಸೋಜಾ ರವರನ್ನ ಭೇಟಿ :...

ವಿದ್ಯಾರ್ಥಿ ನಾಯಕ ಕ್ರಿಸ್ಟನ್ ಮಿನೇಜಸ್ ರವರು MLC ಶ್ರೀ ಐವನ್ ಡಿಸೋಜಾ ರವರನ್ನ ಭೇಟಿ : ಬಂಟ್ವಾಳ – ಮೂಡಬಿದ್ರೆ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ – ಸೌಲಭ್ಯ ಒದಗಿಸಿಕೊಡುವಂತೆ ವಿನಂತಿ…!!

ಮಂಗಳೂರು : ವಿದ್ಯಾರ್ಥಿ ನಾಯಕ NSUI ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ಕ್ರಿಸ್ಟನ್ ಮಿನೇಜಸ್ ರವರು ಬಂಟ್ವಾಳ – ಮೂಡಬಿದ್ರೆ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆಯಿಲ್ಲದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಂಟಾದ ಸಮಸ್ಯೆಯ ವಿಷಯದ ಕುರಿತು ಪ್ರಸ್ತಾಪಿಸಿದರು.

ಸರ್ಕಾರಿ ಬಸ್‌ ಸೇವೆ ಇಲ್ಲದೇ ಇರುವ ಕಾರಣ ವಿದ್ಯಾರ್ಥಿಗಳು ಖಾಸಗಿ ಬಸ್‌ಗಳ ಉಪಯೋಗ ಮಾಡಬೇಕಾದ ಪರಿಸ್ಥಿತಿ ಇದೆ. ಇದರಿಂದ ಪ್ರಯಾಣದ ವೆಚ್ಚ ಹೆಚ್ಚಾಗಿದ್ದು, ಬಸ್‌ಗಳಲ್ಲಿ ಅತೀ ಜನಸಂದಣಿ ವಿದ್ಯಾರ್ಥಿಗಳ ಸುರಕ್ಷತೆಗೆ ತೊಂದರೆ ಉಂಟುಮಾಡುತ್ತಿದೆ.

ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ವಿದ್ಯಾರ್ಥಿ ಪಾಸ್‌ಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ, ಇದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರತಿದಿನ ಪ್ರಯಾಣ ಮಾಡಲು ಕಷ್ಟವಾಗುತ್ತಿದೆ. ಜೊತೆಗೆ, ರಾಜ್ಯ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಶಕ್ತಿ ಯೋಜನೆ, ಅಂದರೆ ಮಹಿಳೆಯರಿಗೆ ಉಚಿತ ಕೆಎಸ್‌ಆರ್‌ಟಿಸಿ ಪ್ರಯಾಣದ ಯೋಜನೆಯ ಪ್ರಯೋಜನವು ಈ ಮಾರ್ಗದಲ್ಲಿ ಯಾರಿಗೂ ಪಡೆಯಲು ಸಾಧ್ಯವಾಗುತ್ತಿಲ್ಲ.

ಈ ಸಮಸ್ಯೆಯನ್ನು ಪರಿಹರಿಸಲು ಕ್ರಿಸ್ಟನ್ ಮಿನೇಜಸ್ ರವರು ಶ್ರೀ ಐವನ್ ಡಿಸೋಜಾ, ಮಾನ್ಯ ವಿಧಾನಪರಿಷತ್ ಸದಸ್ಯರು, ಕರ್ನಾಟಕ ಸರ್ಕಾರ ಅವರನ್ನ ಭೇಟಿಯಾಗಿ ಚರ್ಚೆ ಮಾಡಿ ಮನವಿ ಸಲ್ಲಿಸಿದ್ದಾರೆ. ಶ್ರೀ ಐವನ್ ಡಿಸೋಜಾ ಅವರು ಈ ವಿಷಯವನ್ನು ಶ್ರೀ ರಾಮಲಿಂಗಾ ರೆಡ್ಡಿ, ಮಾನ್ಯ ಸಾರಿಗೆ ಸಚಿವರು, ಕರ್ನಾಟಕ ಸರ್ಕಾರ ಅವರಿಗೆ ಪತ್ರದ ಮೂಲಕ ಕಳುಹಿಸಿದ್ದಾರೆ.

ಇದಲ್ಲದೆ, ಕ್ರಿಸ್ಟನ್ ಅವರು ಶ್ರೀ ಶ್ರೀಧರ ಮಲ್ಲಾಡ್, ಸಾರಿಗೆ ಉಪ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು (ದಕ್ಷಿಣ ಕನ್ನಡ) ಹಾಗೂ ಶ್ರೀ ರಾಜೇಶ್ ಶೆಟ್ಟಿ, ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಇವರನ್ನು ಸ್ವತಃ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಶ್ರೀ ಐವನ್ ಡಿಸೋಜಾ ರವರು ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಪ್ರಾರಂಭಿಸಲು ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕ್ರಿಸ್ಟನ್ ಮಿನೇಜಸ್ ಅವರು ಸರ್ಕಾರದ ಈ ಕ್ರಮವು ವಿದ್ಯಾರ್ಥಿಗಳಿಗೆ ಬಹು ಪ್ರಯೋಜನಕಾರಿಯಾಗಲಿದ್ದು, ವಿದ್ಯಾರ್ಥಿಗಳಲ್ಲಿ ಸರ್ಕಾರದ ಮೇಲಿನ ನಂಬಿಕೆಯನ್ನು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.