ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಮೀನುಗಾರಿಕಾ ಬೋಟಿನಲ್ಲಿ ವ್ಯಕ್ತಿಯೊಬ್ಬರು ಆಯತಪ್ಪಿ ಸಮುದ್ರದ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಸಾವನ್ನಪ್ಪಿದವರು ಮಂಜು ಸಾತ ಗೌಡ ಎಂದು ತಿಳಿಯಲಾಗಿದೆ.
ಪ್ರಕರಣದ ಸಾರಾಂಶ : ಫಿರ್ಯಾದಿದಾರರಾದ ಜಯವಂತ, ಹೊನ್ನಾವರ, ಉತ್ತರ ಕನ್ನಡ ಇವರ ತಂದೆಯಾದ ಮಂಜು ಸಾತ ಗೌಡ (55) ರವರು ಇಮ್ತಿಯಾಜ ಮಾಲೀಕತ್ವದ IND KA03MM3092 ಸಾಗರ ಎಂಬ ಪರ್ಷಿಯನ್ ಮೀನುಗಾರಿಕೆ ಬೋಟ್ ನಲ್ಲಿ ಕಲಾಸಿಯಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಫಿರ್ಯಾಧಿದಾರರ ತಂದೆ ದಿನಾಂಕ 07/08/2025 ರಂದು ಮನೆಯಿಂದ ಭಟ್ಕಳಕ್ಕೆ ಮೀನುಗಾರಿಕೆ ಹೋಗಿರುತ್ತಾರೆ. ಫಿರ್ಯಾಧಿದಾರರ ತಂದೆ ದಿನಾಂಕ 27-08-2025 ರಂದು ಫಿರ್ಯಾಧಿದಾರರ ತಂದೆ ಮೀನುಗಾರಿಕೆ ಕೆಲಸ ಮಾಡಿಕೊಂಡಿರುವ ಬೋಟಿನ ಮಾಲಿಕರು ಪೋನ ಮಾಡಿ ಫಿರ್ಯಾಧಿದಾರರ ತಂದೆ ದಿನಾಂಕ 26/08/2025 ರಂದು ಮೀನುಗಾರಿಕೆಗೆ ಹೋಗಿದ್ದು ಅದೇ ದಿನದಂದು ರಾತ್ರಿ 23:30 ಗಂಟೆ ಸಮಯಕ್ಕೆ ಮೀನುಗಾರಿಕೆ ಕೆಲಸ ಮಾಡಿಕೊಂಡು ವಾಪಸ್ಸು ಬರುತ್ತಿರುವಾಗ ಭಟ್ಕಳ ಅಳ್ವೆ ಬಂದರಿನ ಸಮೀಪ ಬೋಟಿನಿಂದ ಆಯತಪ್ಪಿ ಸಮುದ್ರದ ನೀರಿಗೆ ಬಿದ್ದಿದ್ದು ನಾವೆಲ್ಲರೂ ಸೇರಿ ಹುಡುಕುತ್ತಿರುವುದಾಗಿ ತಿಳಿಸಿರುತ್ತಾರೆ. ಫಿರ್ಯಾಧಿದಾರರು ಮತ್ತು ಅವರ ಸಂಭಂದಿಕರು ಬಂದು ಕೂಡಿ ಹುಡುಕಿದ್ದು ಪತ್ತೆಯಾಗಿರುವುದಿಲ್ಲ ನಂತರ ದಿನಾಂಕ 27/08/2025 ರಂದು ಫಿರ್ಯಾಧಿದಾರರ ತಂದೆ ಕಾಣೆಯಾದ ಬಗ್ಗೆ ಭಟ್ಕಳ ಗ್ರಾಮಾಂತರ ಠಾಣೆಯಲ್ಲಿ ಠಾಣಾ ಅಕ್ರ 113/2025 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲು ಮಾಡಿರುವುದಾಗಿದೆ. ದಿನಾಂಕ 30-08-2025 ರಂದು ಕಿರಿಮಂಜೇಶ್ವರ ಜನತಾ ಆಂಗ್ಲ ಮಾಧ್ಯಮ ಶಾಲೆಯ ಸಮೀಪ ಕಡಲ ಕಿನಾರೆಯಲ್ಲಿ ಮೃತ ದೇಹ ಬೆಳಿಗ್ಗೆ 09:00 ಗಂಟೆಗೆ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುತ್ತದೆ.ಮೃತ ದೇಹದ ಮೇಲಿನ ಬಟ್ಟೆ ನೋಡಿ ಫಿರ್ಯಾಧಿದಾರರು ಅವರ ತಂದೆಯ ಮೃತ ದೇಹವೆಂದು ಗುರುತಿಸಿರುತ್ತಾರೆ.ಫಿರ್ಯಾಧಿದಾರರ ತಂದೆ ಮೀನುಗಾರಿಕೆ ಕೆಲಸ ಮಾಡಿಕೊಂಡಿರುವಾಗ ಸಮುದ್ರದ ನೀರಿಗೆ ಬಿದ್ದು ಸಮುದ್ರದ ಅಲೆಗೆ ಸಿಲುಕಿ ಮೃತ ಪಟ್ಟಿರುತ್ತಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 38/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.