ಕಾಪು : ಉಡುಪಿ ಜಿಲ್ಲೆಯ ಕಾಪು ಸಮೀಪದ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಅಭಿಷೇಕ್ ಪಾಲನ್ ಹಾಗೂ ಆರ್. ಶಾಶ್ವತ್ ಎಂದು ಗುರುತಿಸಲಾಗಿದೆ.
ಶಿರ್ವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.
ಪ್ರಕರಣದ ಸಾರಾಂಶ : ದಿನಾಂಕ:09.10.2025 ರಂದು ಕಾಪು ತಾಲೂಕು ಬೆಳಪು ಗ್ರಾಮದ ಬೆಳಪು ಇಂಡಸ್ಟ್ರಿಯಲ್ ಏರಿಯಾ ಕ್ರಾಸ್ ರಸ್ತೆ ಬಳಿ ಗಾಂಜಾ ಮಾರಾಟ ಮಾಡುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಶಿರ್ವ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಮಂಜುನಾಥ ಮರಬದ ಇವರು ಠಾಣಾ ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ 10.30 ಗಂಟೆಗೆ ದಾಳಿ ಮಾಡಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಅಪಾದಿತರಾದ 1) ಅಭಿಷೇಕ್ ಪಾಲನ್(30), ತಂದೆ: ಉದಯ ಪಾಲನ್, ವಾಸ:ಮನೆ ನಂಬ್ರ 18-61A, ಗರ್ಡೆ ಹೌಸ್, ಲಕ್ಷ್ಮೀ ನಿವಾಸ, ಲಕ್ಷ್ಮಿನಗರ, ಕೊಡವೂರು ಗ್ರಾಮ, ಉಡುಪಿ 2) ಆರ್.ಶಾಶ್ವತ್(24), ತಂದೆ: ಎಂ.ರಾಜೇಂದ್ರ, ವಾಸ: ಲಕ್ಷ್ಮಿನಗರ, ಕೊಳಲಗಿರಿ, ಉಪ್ಪೂರು ಗ್ರಾಮ, ಉಡುಪಿ ಇವರುಗಳನ್ನು ವಶಕ್ಕೆ ಪಡೆದು ಆರೋಪಿತರು ತೋರಿಸಿ ಹಾಜರುಪಡಿಸಿದ ಸುಮಾರು 115.44 ಗ್ರಾಂ ಗಾಂಜ(ಅಂದಾಜು ಮೌಲ್ಯ 5,000/-), ತೂಕದ ಡಿಜಿಟಲ್ ಯಂತ್ರ(ಅಂದಾಜು ಮೌಲ್ಯ 200/-), ಎಲೆಯ ಚಿತ್ರವಿರುವ ಪ್ಲಾಸ್ಟಿಕ್ ಡಬ್ಬ-1(ಅಂದಾಜು ಮೌಲ್ಯ 50/-), ಕೆಂಪು ಬಣ್ಣದ ಝಿಪ್ ಇರುವ ಕೈ ಚೀಲ-1 ಮತ್ತು ಕೃತ್ಯ ಸ್ಥಳದಲ್ಲಿದ್ದ Yamaha FZ ನೀಲಿ ಬಣ್ಣದ KA20HC7563ನೇ ಮೋಟಾರ್ ಸೈಕಲನ್ನು(ಅಂದಾಜು ಮೌಲ್ಯ 70,000/-) ಸ್ವಾಧೀನಪಡಿಸಿಕೊಂಡಿರುವುದಾಗಿದೆ.
ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 68/2025, ಕಲಂ 8(c), 20(b)(ii)(A) NDPS Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

