ಕುಮಟಾ : ಪುರಸಭೆ ಅಧಿಕಾರಿಯಿಂದ ಮಾನಸಿಕ ಕಿರುಕುಳ : ಸಿಬ್ಬಂಧಿ ನಾಪತ್ತೆ
ಭಟ್ಕಳ : ಕೆಲಸದ ವೇಳೆ ಮಾನಸಿಕ ಕಿರುಕುಳ ಅನುಭವಿಸಿದ ಯುವಕನೊಬ್ಬ ಕಾಣೆಯಾಗಿರುವ ಘಟನೆ ಭಟ್ಕಳ ತಾಲೂಕಿನ ಕೋಟೆಶ್ವರ ಹರಿಜನಕೇರಿಯಲ್ಲಿ ಬೆಳಕಿಗೆ ಬಂದಿದೆ.
ಕಾಣೆಯಾದ ಯುವಕನನ್ನು ವೆಂಕಟೇಶ್ ರಮೇಶ್ ಹರಿಜನ (25) ಎಂದು ಗುರುತಿಸಲಾಗಿದ್ದು, ಅವರು ಕುಮಟಾ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ದೂರುದಾರೆಯಾದ ತಾಯಿ ಅಶಾ ರಮೇಶ್ ಹರಿಜನ (43) ಅವರು ಭಟ್ಕಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಪುರಸಭೆಯ ಮುಖ್ಯಾಧಿಕಾರಿಯಿಂದ ಕೆಲಸದ ವಿಚಾರದಲ್ಲಿ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರಿಂದ ಮಗ ಮನಸ್ಸಿಗೆ ಹಚ್ಚಿಕೊಂಡು, ಮಧ್ಯರಾತ್ರಿ ಮನೆಯಿಂದ ಯಾರಿಗೂ ಹೇಳದೆ ಹೊರಟು ಕಾಣೆಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಮಗ ನಾಪತ್ತೆಯಾಗುವ ಮೊದಲು ಪುರಸಭೆಯ ಅಧಿಕಾರಿಯ ವಿರುದ್ಧ ಪತ್ರವೊಂದನ್ನು ಬರೆದಿಟ್ಟು ಹೊರಟಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಈ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಶೋಧ ಕಾರ್ಯ ಮುಂದುವರಿದಿದೆ.