Home Latest ಬೀಡಿನಗುಡ್ಡೆ–ಅಲೆವೂರು ರಸ್ತೆ ಬಳಿ ಕಸ ಮರುಸಂಸ್ಕರಣಾ ಕಾರ್ಖಾನೆಗೆ ವಿರೋಧ

ಬೀಡಿನಗುಡ್ಡೆ–ಅಲೆವೂರು ರಸ್ತೆ ಬಳಿ ಕಸ ಮರುಸಂಸ್ಕರಣಾ ಕಾರ್ಖಾನೆಗೆ ವಿರೋಧ

ಉಡುಪಿ: ನಗರದ ಬೀಡಿನಗುಡ್ಡೆ ವೃತ್ತದಿಂದ ಅಲೆವೂರು ಸಂಪರ್ಕಿಸುವ ಮುಖ್ಯ ರಸ್ತೆಯ ಬಳಿ ಕಸ ಮರುಸಂಸ್ಕರಣಾ ಕಾರ್ಖಾನೆಯೊಂದು ನಿರ್ಮಾಣ ಹಂತದಲ್ಲಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

 

ಉಡುಪಿ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಿಂದ ಸಂಗ್ರಹವಾಗುವ ಕಸವನ್ನು ಇಲ್ಲಿ ಸಂಗ್ರಹಿಸಿ, ಮರುಬಳಕೆಗೆ ಯೋಗ್ಯ ವಸ್ತುಗಳು ಹಾಗೂ ಗೊಬ್ಬರ ತಯಾರಿಸುವ ಉದ್ದೇಶವಿದೆ ಎಂದು ಹೇಳಲಾಗುತ್ತಿದೆ.

 

ಈ ಯೋಜನೆ ಒಳ್ಳೆಯದಾಗಿದ್ದರೂ, ನಗರ ಪ್ರದೇಶದಲ್ಲೇ ಇಂತಹ ಕಾರ್ಖಾನೆ ಸ್ಥಾಪಿಸುವುದು ಅವೈಜ್ಞಾನಿಕ ಎಂದು ಸಮಾಜಸೇವಕ ಹಾಗೂ ನಗರಸಭೆಯ ಮಾಜಿ ಸದಸ್ಯ ನಿತ್ಯಾನಂದ ಒಳಕಾಡುವರು ವಿರೋಧ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆಯಿಂದ ದುರ್ವಾಸನೆ, ಶಬ್ದ ಹಾಗೂ ವಾಯು ಮಾಲಿನ್ಯ ಉಂಟಾಗಿ ಜನರ ಆರೋಗ್ಯಕ್ಕೆ ಅಪಾಯವಾಗಬಹುದು. ಈ ಪ್ರದೇಶದಲ್ಲಿ ವಸತಿ ಸಮುಚ್ಚಯಗಳು, ಶಾಲಾ–ಕಾಲೇಜುಗಳು, ಧಾರ್ಮಿಕ ಕೇಂದ್ರಗಳು ಹಾಗೂ ಸಾವಿರಾರು ಕಾರ್ಮಿಕರ ವಸತಿಗಳು ಇರುವುದರಿಂದ ಸಮಸ್ಯೆ ಇನ್ನಷ್ಟು ಗಂಭೀರವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.