Home Karavali Karnataka ಕುಂದಾಪುರ: “ಶ್ಲೋಕ ಕಂಠಪಾಠ” ಸ್ಪರ್ಧೆಯಲ್ಲಿ ಕುಮಾರಿ ವೈಷ್ಣವಿ ರಾಜ್ಯ ಮಟ್ಟಕ್ಕೆ ಆಯ್ಕೆ…!!

ಕುಂದಾಪುರ: “ಶ್ಲೋಕ ಕಂಠಪಾಠ” ಸ್ಪರ್ಧೆಯಲ್ಲಿ ಕುಮಾರಿ ವೈಷ್ಣವಿ ರಾಜ್ಯ ಮಟ್ಟಕ್ಕೆ ಆಯ್ಕೆ…!!

ಕುಂದಾಪುರ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಮತ್ತು ಶಾಂತಿವನ ಟ್ರಸ್ಟ್ (ರಿ) ಶ್ರೀ ಕ್ಷೇತ್ರ ಧರ್ಮಸ್ಥಳ ಇವರು ನಡೆಸಿದ ಪುಸ್ತಕಾಧಾರಿತ ಸ್ಪರ್ಧೆ “ಶ್ಲೋಕ ಕಂಠಪಾಠ”ದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಾಡು ಇಲ್ಲಿಯ ವಿದ್ಯಾರ್ಥಿನಿ ಕು| ವೈಷ್ಣವಿ ಅರುಣ್ ಆಚಾರ್ಯ ಅರಾಟೆ ಯವರು ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ ಕುಮಾರಿ ವೈಷ್ಣವಿ ಯವರ ಸಾಧನೆಗೆ ಶಿಕ್ಷಕ ವೃಂದ ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಶಾಲೆಯ SDMC ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿಯ ಸಾಧನೆ ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿ ಎಂದು ಗ್ರಾಮಸ್ಥರು ಮತ್ತು ಸಾರ್ವಜನಿಕರ ಅಭಿಪ್ರಾಯವಾಗಿದೆ.

ವೈಷ್ಣವಿ ಸಾಧನೆ ಇನ್ನೆಷ್ಟು ಎತ್ತರಕ್ಕೆ ಬೆಳೆದು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ, ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತರುವಂತೆ ಆಗಲಿ ಎಂಬುವುದೇ ನಮ್ಮ ಆಶಯ!!