ಉಡುಪಿ : ಸುಮಾರು ಹದಿಮೂರು ವರ್ಷಗಳಿಂದ ಪತ್ತೆಯಾಗದೇ ಇದ್ದ ಯುವಕನನ್ನು ಪೊಲೀಸರು ಪತ್ತೆ ಹಚ್ಚಿ ಮನೆಯವರಿಗೆ ಒಪ್ಪಿಸಿದ್ದಾರೆ.
ಪ್ರಕರಣದ ವಿವರ: ದಿನಾಂಕ 06/12/2012 ಗ್ರಾಮದ ಪ್ರಭಾಕರ ಪ್ರಭು ರವರ ಮಗನಾದ ಅನಂತ ಕೃಷ್ಣ ಪ್ರಭು(16) ಎಂಭಾತನು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಮುಂಡ್ಕೂರು ಪ್ರಥಮ ಪಿಯುಸಿ ವಿದ್ಯಾಬ್ಯಾಸ ಮಾಡುತ್ತಿರುವಾಗ ಮನೆಯಿಂದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೊದವನು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಈ ಬಗ್ಗೆ ಅವರ ತಂದೆ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯ ಅಪರಾಧ ಕ್ರಮಾಂಕ 117/2012 ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಈ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಬಗ್ಗೆ ಖಚಿತಪಡಿಸಿಕೊಂಡು ಅನಂತಕೃಷ್ಣ ಪ್ರಭು(29) ವನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿರುತ್ತಾರೆ.
ಸುಮಾರು 13 ವರ್ಷಗಳಿಂದ ಪತ್ತೆಯಾಗದೇ ಇರುವ ಹಳೆ ಪ್ರಕರಣವನ್ನು ಪ್ರಭು ಡಿ ಟಿ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪವಿಭಾಗ, ಸುದರ್ಶನ್ ದೊಡಮನಿ, ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ, ಈರಣ್ಣ ಶಿರಗುಂಪಿ ಪೊಲೀಸ್ ಉಪ ನಿರೀಕ್ಷಕರು, ಉಡುಪಿ ನಗರ, ಹೆಚ್ಸಿ ಇಮ್ರಾನ್, ಹೆಚ್ಸಿ ಚೇತನ್, ಪಿಸಿ ಸಂತೋಷ್ ದೇವಾಡಿಗ ಮತ್ತು ಪಿಸಿ ಮಲ್ಲಯ್ಯ ಹಿರೇಮಠ ಅವರನ್ನೊಳಗೊಂಡ ತಂಡ ಈತನನ್ನು ಪತ್ತೆ ಹಚ್ಚಿರುತ್ತಾರೆ.

