ಸಿದ್ದಾಪುರ : ಕರ್ನಾಟಕ ರಣಧೀರರ ವೇಧಿಕೆ(ರಿ)ಬೆಂಗಳೂರು ಕನ್ನಡ ಸಂಘಟನೆ ಯ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕ ಘಟಕದ ಉದ್ಘಾಟನಾ ಕಾರ್ಯಕ್ರಮ ಮತ್ತು ಸಿದ್ದಾಪುರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವು ದಿನಾಂಕ 27/4/25 ರಂದು ರವಿವಾರ 10.30 ಕ್ಕೆ ಸಿದ್ದಾಪುರ ತಾಲೂಕಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೇಯಲಿದೆ ಎಂದು ಸಂಘಟನೆ ಯ ಸಿದ್ದಾಪುರ ತಾಲೂಕು ಅಧ್ಯಕ್ಷ ಮೋಹನ್ ಪಾಂಡುರಂಗ ನಾಯ್ಕ ತಿಳಿಸಿದ್ದಾರೆ.
ಕಾರ್ಯಕ್ರಮ ದ ಉದ್ಘಾಟಕರಾಗಿ ಕರ್ನಾಟಕ ರಣಧೀರರ ವೇಧಿಕಯ ಸ್ಥಾಪಕ ಅದ್ಯಕ್ಷ ರಾದ ಶ್ರೀ ಶಂಕರ ಗೌಡ್ರು.ಕೆ.ಆರ್ ಬೆಂಗಳೂರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರಾವಳಿ ಕರ್ನಾಟಕ ಅಧ್ಯಕ್ಷ ರಾದ ಕುಮಾರ ನಾಯ್ಕ ಮತ್ತು ರಾಜ್ಯ ಮಟ್ಟದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಸೂರಜ ನಾಯ್ಕ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉತ್ತರ ಕನ್ನಡ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕುಮಾರಿ ಸುಪ್ರಿಯಾ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಕಿರಣ್ , ಜಿಲ್ಲಾ ಮತ್ತು ರಾಜ್ಯ ಹಲವು ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ. ಕನ್ನಡ ನಾಡಿನ ಭಾಷೆ, ನೆಲ, ಜಲ ಮತ್ತು ನಾಡು , ನುಡಿ , ಕನ್ನಡಿಗರಿಗೆ ಅನ್ಯಾಯವಾದ ಸಂದರ್ಭದಲ್ಲಿ ಹೋರಾಟ ಮಾಡುವುದು ಸಂಘಟನೆ ಯ ಮುಖ್ಯ ಉದ್ದೇಶ ಎಂದು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ನಾಡ ಪ್ರೇಮಿಗಳು ಮತ್ತು ಕನ್ನಡಾಭಿಮಾನಿಗಳು ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಕಾರ್ಯಕ್ರಮ ವನ್ನು ಯಶಸ್ವೀಗೊಳಿಸಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.