Home Crime ಬೈಂದೂರು : ಲಾರಿ ಹಾಗೂ ಬೈಕ್ ನಡುವೆ ಅಪಘಾತ : ಸವಾರ ಸಾವು…!!

ಬೈಂದೂರು : ಲಾರಿ ಹಾಗೂ ಬೈಕ್ ನಡುವೆ ಅಪಘಾತ : ಸವಾರ ಸಾವು…!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಲಾರಿಯೊಂದು ಬೈಕಿಗೆ ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಪಟ್ಟ ಬೈಕ್ ಸವಾರ ಗೋಪಾಲ ಮೇಸ್ತ ಎಂದು ತಿಳಿದು ಬಂದಿದೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ಫಿರ್ಯಾದಿ ಮನೋಜ ಎನ್‌ ಮೇಸ್ತಾ (20) ಶಿರೂರು ಗ್ರಾಮ, ಬೈಂದೂರು ಇವರು ದಿನಾಂಕ : 29/08/2025 ರಂದು ರಾತ್ರಿ 10:55 ಗಂಟೆ ಸುಮಾರಿಗೆ ತನ್ನ ಸ್ನೇಹಿತ ರಾದ ಗೋಪಾಲ ಮೇಸ್ತಯವರ ಜೂತೆ KA 20 EB 5474 ನೇ ಮೋಟಾರು ಸೈಕಲ್‌ನಲ್ಲಿ ಹಿಂಬದಿ ಸವಾರನಾಗಿ ಕುಳಿತು ಗೋಪಾಲ ಮೇಸ್ತಯವರು ಮೋಟಾರು ಸೈಕಲ್‌ನ್ನು ಶಿರೂರು ಕಡೆಯಿಂದ ಭಟ್ಕಳ ಕಡೆಗೆ N.H 66 ರ ಪಶ್ಚಿಮ ಫಥದಲ್ಲಿ ಚಲಾಯಿಸಿಕೊಂಡು ಹೋಗುತ್ತಿದಾಗ ಶಿರೂರು ಗ್ರಾಮದ ಶಿರೂರು ಪೊಲೀಸ್‌ ಚಕ್‌ಪೋಸ್ಟ್‌ ಬಳಿ ಪಿರ್ಯಾಧಿದಾರರ ಮೋಟಾರು ಸೈಕಲ್‌ ಹಿಂದಿನಿಂದ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ KA 22 B 0040 ನೇ ಲಾರಿಯನ್ನು ಅದರ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾಧಿ ದಾರರ ಮೋಟಾರು ಸೈಕಲ್‌ನ್ನು ಓವರ್‌ಟೆಕ್‌ ಮಾಡುವ ಭರದಲ್ಲಿ ಮೋಟಾರು ಸೈಕಲ್‌ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸವಾರರರು ಮೋಟಾರು ಸೈಕಲ್‌ ಸಮೇತ ಬ್ಯಾರಿಕೇಡ್‌ ಮೇಲೆ ಬಿದ್ದು ರಸ್ತಗೆ ಬಿದ್ದ ಪರಿಣಾಮ ಮೋಟಾರು ಸೈಕಲ್‌ ಚಲಾಯಿಸುತ್ತಿದ ಗೋಪಾಲ ಮೇಸ್ತಯವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಪಿರ್ಯಾಧಿದಾರರಿಗೆ ಎಡಕಾಲು ಮೊಣಗಂಟಿಗೆ ರಕ್ತ ಗಾಯ ಮತ್ತು ಒಳನೋವು ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿರುತ್ತಾರೆ. ಅಪಘಾತದ ಬಳಿಕ ಲಾರಿಯನ್ನು ಅದರ ಚಾಲಕನು ನಿಲ್ಲಿಸದೇ ಚಲಾಯಿಸಿ ಕೊಂಡು ಹೋಗಿರುತ್ತಾನೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 156/2025 ಕಲಂ:281,125 (a) 106 BNS & 134 (a) & (b) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.‌