Home Karavali Karnataka ಬೈಂದೂರು : ಜಟ್ಟಿಗೇಶ್ವರ ಹಾಗೂ ಭದ್ರ ಮಹಾಕಾಳಿ ಸ ಪರಿವಾರ ಗರಡಿ ಗುಜ್ಜಾಡಿ ಯಲ್ಲಿ 7...

ಬೈಂದೂರು : ಜಟ್ಟಿಗೇಶ್ವರ ಹಾಗೂ ಭದ್ರ ಮಹಾಕಾಳಿ ಸ ಪರಿವಾರ ಗರಡಿ ಗುಜ್ಜಾಡಿ ಯಲ್ಲಿ 7 ನೇ ವರ್ಷದ ಶರನ್ನವರಾತ್ರಿ ಮಹೋತ್ಸವ….!!

ಬೈಂದೂರು: 7ನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಚಂಡಿಕಾಯಾಗ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಬೆನ್ಗೆರೆ ಶ್ರೀ ಜಟ್ಟಿಗೇಶ್ವರ ಭದ್ರ ಮಾಂಕಾಳಿ ಸ ಪರಿವಾರ ದೈವಸ್ಥಾನದಲ್ಲಿ ಜರುಗಿತು.

ನವರಾತ್ರಿ ಪ್ರಯುಕ್ತ ಪ್ರತಿ ದಿನ ಶ್ರೀ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು, ಹಾಗೂ ದಶಮಿಯಂದು ಚಂಡಿಕಾಯಾಗ ವಿಶೇಷ ಪೂಜೆ ಮತ್ತು ಮಹಾ ಅನ್ನ ಸಂತರ್ಪಣೆ ಜರುಗಿತು
ಶ್ರೀ ಜಟ್ಟಿಗೇಶ್ವರ ಭದ್ರಾ ಮಹಾಕಾಳಿ ದೈವಸ್ಥಾನದ ಅಧ್ಯಕ್ಷ ಬಾಬು ಜೆ .ಪೂಜಾರಿ ಉಪ್ಪುಂದ. ಅವರು ಮಾತನಾಡಿ ದೈವಸ್ಥಾನವನ್ನು ನಂಬಿದಂತ ಗ್ರಾಮಸ್ಥರು ಮತ್ತು ಊರ ಪರ ಊರಿನಲ್ಲಿ ಇರುವ ಸಾವಿರಾರು ಭಕ್ತರು ಸನ್ನಿಧಾನಕ್ಕೆ ಭೇಟಿ ನೀಡುತ್ತಾರೆ, ಆದರೆ ಸತತ ಪ್ರಯತ್ನ ಮಾಡಿದರು ಕೂಡ. ದೇವಸ್ಥಾನಕ್ಕೆ ಬರುವ ರಸ್ತೆ ಅಭಿವೃದ್ಧಿ ಮಾಡದೆ ಇರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ, ಈತನಕ ಶಾಸಕರಿಗೆ ಹಾಗೂ ಸಂಸದರಿಗೆ ಸಚಿವರಿಗೆ ಹಿರಿಯ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮಾಹಿತಿ ನೀಡಿದರು ಕೂಡ ಇಲ್ಲಿಯ ತನಕರಸ್ತೆ ಅಭಿವೃದ್ಧಿ ಆಗದೆ ಇರುವುದು ಶ್ರೀ ದೇವರನ್ನು ನಂಬಿದಂತಹ ಸಹಸ್ರಾರು ಭಕ್ತರ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದು ಹೇಳಿದರು, ಹಾಗೂ ನವರಾತ್ರಿ ಹಬ್ಬದ ಶುಭಾಶಯ ಹಂಚಿಕೊಂಡರು.

2 – 10 -2025 ಗುರುವಾರ ನಡೆದ ಚಂಡಿಕಾ ಯಾಗ ಮತ್ತು ಅನ್ನ ಸಂತರ್ಪಣೆ ಶ್ರೀ ದೇವರಿಗೆ ವಿಶೇಷ ಪೂಜೆ ನೆರವೇರಿತು, ಹಾಗೂ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು, ಹಾಗೂ ಸಂಜೆಯ ವೇಳೆ ಸಭಾ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ಭಕ್ತಿ ಗೀತೆ, ಭಜನೆ, ಮಕ್ಕಳ ಕ್ರೀಡಾಕೂಟ ಪಂದ್ಯಾವಳಿ ದೈವಸ್ಥಾನಕ್ಕೆ ದೇಣಿಗೆ ನೀಡಿದಂತ ದಾನಿಗಳಿಗೆ ಗೌರವದ ಸನ್ಮಾನ ಕಾರ್ಯಕ್ರಮ ಜರುಗಿತು,

ಈ ವೇಳೆ ದೇವಸ್ಥಾನದ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಊರಿನ ಹಿರಿಯರು ಉದ್ಯಮಿಗಳು ಜನಪ್ರತಿನಿಧಿಗಳು ಗ್ರಾಮಸ್ಥರು ಹಾಜರಿದ್ದರು.