ಮಂಗಳೂರು : ನಗರದ ಸುರತ್ಕಲ್ ಸಮೀಪ ಕಾಟಿಪಳ್ಳದ 8ನೇ ಬ್ಲಾಕ್ ಚೊಕ್ಕಬೆಟ್ಟುವಿನ ಅಂಚೆ ಕಚೇರಿ ರಸ್ತೆಯ ಅಬ್ದುಲ್ ಖಾದರ್ ರವರ ಮನೆಯಲ್ಲಿ ಅಕ್ರಮವಾಗಿ ದನ ವಧೆಯನ್ನು ಮಾಡುತ್ತಿದ್ದ ಕುರಿತು ಖಚಿತ ಮಾಹಿತಿ ಮೇರೆಗೆ ಸುರತ್ಕಲ್ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಮತ್ತೋರ್ವ ತಲೆಮರೆಸಿಕೊಂಡಿದ್ದಾನೆ.
ಬಂಧಿತರು ಚೊಕ್ಕಬೆಟ್ಟುವಿನ ಅಜೀಜ್ ಅಹಮ್ಮದ್(55), ಇಮ್ಮಿಯಾಜ್ (41), ಎ ಕೆ ಆಶೀಕ್(22) ಎಂದು ಗುರುತಿಸಲಾಗಿದೆ..
ಮತ್ತೋರ್ವ ಆರೋಪಿ ಬಶೀರ್ ಚೊಕ್ಕಬೆಟ್ಟು ಎಂಬಾತನು ತಲೆಮರೆಸಿಕೊಂಡಿದ್ದಾನೆ.
ಆರೋಪಿ ಇಮ್ಮಿಯಾಜ್ ನು ತಂದಿದ್ದ 2 ಹೆಣ್ಣು ಕರುಗಳನ್ನು ಬಶೀರ್ ಹಾಗೂ ಅಶಿಕ್ ಇವರೊಂದಿಗೆ ಸೇರಿಕೊಂಡು ವಧೆ ಮಾಡಿ ದನದ ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡಲು ಮುಂದಾಗಿದ್ದರು ಎಂದು ಹೇಳಲಾಗಿದೆ.
ಈ ಸಂದರ್ಭ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.