ಉಡುಪಿ : ಹೆಸರಾಂತ ಚತುರ್ಭಾಷಾ ನಟ ಶ್ರೀ ವಸಿಷ್ಠ ಸಿಂಹ ಅವರು ಮಂಗಳವಾರ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ ಮಕ್ಕಳ ಶಿಸ್ತು, ಶಾಲೆಯ ಬೆಳವಣಿಗೆಯನ್ನು ಕಂಡು ಪ್ರಶಂಸೆ ವ್ಯಕ್ತಪಡಿಸಿದರು.
ಶಾಲೆಯ ಸಂಚಾಲಕ ಅಲೆವೂರು ದಿನೇಶ್ ಕಿಣಿ ಹಾಗೂ ಮುಖ್ಯೋಪಾಧ್ಯಾಯಿನಿ ರೂಪಾ ಡಿ. ಕಿಣಿ ಅವರು ವಸಿಷ್ಠ ಸಿಂಹ ಅವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಗೌರವಿಸಿದರು.
ಖ್ಯಾತ ಗಾಯಕ ವಿದ್ವಾನ್ ನಾರಾಯಣ ಶರಳಾಯ, ಶಾಲಾ ಶಿಕ್ಷಕ-ಶಿಕ್ಷಕಿಯರು ಈ ಸಂದರ್ಭ ಉಪಸ್ಥಿತರಿದ್ದರು.




