ಉಡುಪಿ: ರಾತ್ರಿ ವೇಳೆ ಚಾಲಕನೊಬ್ಬ ಹೆಡ್ ಲೈಟ್ ಕೂಡ ಹಾಕದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಗ್ಯಾಸ್ ಬುಲೆಟ್ ಟ್ಯಾಂಕರ್ ಚಾಲನೆ ಮಾಡಿಕೊಂಡು ಬಂದಿದ್ದು ಕೂದಲೆಳೆಯ ಅಂತರದಲ್ಲಿ ಹಲವಾರು ಅಪಘಾತಗಳು ತಪ್ಪಿದ ಘಟನೆ ವರದಿಯಾಗಿದೆ.
ಅಂಬಲಪಾಡಿಯ ಬಳಿ ವಾಹನವನ್ನು ನಿಲ್ಲಿಸಿ ಸಾರ್ವಜನಿಕರು ಮದ್ಯ ವ್ಯಸನಿಯನ್ನು ವಶಕ್ಕೆ ಪಡೆದು ಪೋಲಿಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಟ್ಯಾಂಕರ್ ಚಾಲಕ ಮಹಾರಾಷ್ಟ್ರ ಮೂಲದವನಾಗಿದ್ದು, ಮದ್ಯ ಸೇವಿಸಿ ರಾತ್ರಿಯ ಹೊತ್ತು ಹೆಡ್ ಲೈಟ್ ಕೂಡ ಹಾಕದೆ ಬಹಳಷ್ಟು ವೇಗವಾಗಿ ಬರುತ್ತಿದ್ದ. ಇದನ್ನು ಗಮನಿಸಿದ ವ್ಯಕ್ತಿಯೊರ್ವರು ವಾಹನವನ್ನು ಹಿಂಬಾಲಿಸಿಕೊಂಡು ಬಂದು ಅಂಬಲಪಾಡಿಯ ಬಳಿ ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭ ಸಾರ್ವಜನಿಕರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.



