Home Crime ಶಿರ್ವ : ಕುತ್ತಿಗೆಗೆ ನೇಣು ಬಿಗಿದು ಕೊಂಡು ಯುವಕನೋರ್ವ ಆತ್ಮಹತ್ಯೆ…!!

ಶಿರ್ವ : ಕುತ್ತಿಗೆಗೆ ನೇಣು ಬಿಗಿದು ಕೊಂಡು ಯುವಕನೋರ್ವ ಆತ್ಮಹತ್ಯೆ…!!

ಶಿರ್ವ: ಉಡುಪಿ ಜಿಲ್ಲೆಯ ಶಿರ್ವಾ ಸಮೀಪ ಯುವಕನೋರ್ವ  ಮನೆಯ ಕಬ್ಬಿಣದ ಪಕ್ಕಾಸಿಗೆ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಆತ್ಮಹತ್ಯೆಗೆ ಶರಣಾದ ಯುವಕ ಮಂಜುನಾಥ ಜಿ ಎಂದು ತಿಳಿದು ಬಂದಿದೆ.

ಈ ಘಟನೆ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಗಂಗಾರಾಮ್ (50) ತಂದೆ:ದಿ, ಹೀರು. ವಾಸ: ಜೋಳದಾರ್, ಗೌಳಿಗರ ಕ್ಯಾಂಪ್,(ಅಶೋಕನಗರ) ಸಾರಥಿ, ಚನ್ನಗಿರಿ ತಾಲೂಕು ರವರು ಕಾಪು ತಾಲೂಕು ಕುರ್ಕಾಲು ಗ್ರಾಮದ ಶಂಕರಪುರ ವಲೇರಿಯನ್‌ ಮಥಾಯಸ್‌ ಎಂಬವರ ಬಾಡಿಗೆ ಮನೆಯಲ್ಲಿ ಹೆಂಡತಿ ನಾಗಮ್ಮ ಮತ್ತು ಮಗ ಮಂಜುನಾಥ ಜಿ (14) ಎಂಬವರೊಂದಿಗೆ ವಾಸ ಮಾಡಿಕೊಂಡಿರುತ್ತಾರೆ. ದಿನಾಂಕ 08/12/2025 ರಂದು ಬೆಳಿಗ್ಗೆ ಪಿರ್ಯಾದಿದಾರರು ಮತ್ತು ಅವರ ಹೆಂಡತಿ ಕೂಲಿ ಕೆಲಸಕ್ಕೆ ಹೋಗಿದ್ದಾಗ ಸಮಯ ಬೆಳಿಗ್ಗೆ 08:30 ಗಂಟೆಯಿಂದ ದಿನಾಂಕ 08/12/2025 ರಂದು ಮದ್ಯಾಹ್ನ 01:30 ಗಂಟೆಯ ನಡುವಿನ ಸಮಯದಲ್ಲಿ ಯಾವುದೋ ವಿಷಯಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರು ಇಲ್ಲದಿದ್ದಾಗ ಮಂಜುನಾಥ ಜಿ ರವರು ಒಂದು ಸೀರೆಯನ್ನು ಪ್ಲಾಸ್ಟಿಕ್‌ ಚೇರ್‌ ಸಹಾಯದಿಂದ ಮನೆಯ ಕಬ್ಬಿಣದ ಪಕ್ಕಾಸಿಗೆ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 23/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.