Home Crime ಮಣಿಪಾಲ : ಅಂದರ್ ಬಾಹರ್ ಜುಗಾರಿ‌ ಆಟ : ನಾಲ್ಕು ಮಂದಿ ಅಂದರ್….!!

ಮಣಿಪಾಲ : ಅಂದರ್ ಬಾಹರ್ ಜುಗಾರಿ‌ ಆಟ : ನಾಲ್ಕು ಮಂದಿ ಅಂದರ್….!!

ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ನಗರದ ಸಮೀಪ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಜಯಂತ್‌ (37), ಹಳ್ಳಿಹೊಳೆ ಗ್ರಾಮ ಕುಂದಾಪುರ, 2.ಶರಣಪ್ಪ(45), 80 ಬಡಗುಬೆಟ್ಟು ಗ್ರಾಮ ಉಡುಪಿ, 3.ಈಶ (36), 80 ಬಡಗುಬೆಟ್ಟು ಗ್ರಾಮ ಉಡುಪಿ, 4.ಹಾಲೇಶ (35) ಎಂದು ಗುರುತಿಸಲಾಗಿದೆ.

ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ದಿನಾಂಕ 05/10/2025 ರಂದು ಅನೀಲ್‌ ಕುಮಾರ್‌ ಬಿ ಎಂ, ಪೊಲೀಸ್‌ ಉಪನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರಿಗೆ ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ರಾಜೀವ ನಗರದ ಬಸ್ಸ್‌ ನಿಲ್ದಾಣದ ಹತ್ತೀರ ಇರುವ ನೀರಿನ ಟ್ಯಾಂಕಿನ ಕೆಳಗೆ ಇರುವ ಸಾರ್ವಜನಿಕ ಮೈದಾನದಲ್ಲಿ ಜನರು ಹಣವನ್ನು ಪಣವನ್ನಾಗಿಟ್ಟು ಅಂದರ್‌ ಬಾಹರ್‌ ಇಸ್ಪೀಟ್‌ ಜುಗಾರಿ ಆಟ ಆಡುತಿದ್ದಾರೆ ಎಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ 1.ಜಯಂತ್‌ (37), ಹಳ್ಳಿಹೊಳೆ ಗ್ರಾಮ ಕುಂದಾಪುರ, 2.ಶರಣಪ್ಪ(45), 80 ಬಡಗುಬೆಟ್ಟು ಗ್ರಾಮ ಉಡುಪಿ, 3.ಈಶ (36), 80 ಬಡಗುಬೆಟ್ಟು ಗ್ರಾಮ ಉಡುಪಿ, 4.ಹಾಲೇಶ (35), 80 ಬಡಗುಬೆಟ್ಟು ಗ್ರಾಮ ಉಡುಪಿ ಇವರನ್ನು ವಶಕ್ಕೆ ಪಡೆದುಕೊಂಡು ಆರೋಪಿತರುಗಳು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ 2,100/- ರೂಪಾಯಿ ನಗದು ಹಾಗೂ ಇಸ್ಪೀಟು ಎಲೆಗಳು, ಹಳೆಯ ದಿನಪತ್ರಿಕೆಯನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 180/2025 ಕಲಂ: 87 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.