ಕೊಲ್ಲೂರು : ಮಾಜಿ ಪೊಲೀಸ್ ಅಧಿಕಾರಿ, ಬಿಜೆಪಿ ಮುಖಂಡ ಅಣ್ಣಾಮಲೈ ಅವರು ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಿ ಮೂಕಾಂಬಿಕೆಯ ದರ್ಶನ ಪಡೆದರು.
ವಿಜಯದಶಮಿಯ ಸಲುವಾಗಿ ಮುಕಾಂಬಿಕೆಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಿ ದರ್ಶನಕ್ಕಾಗಿ ಮುಂಜಾನೆಯೇ ದೇವಾಲಯಕ್ಕೆ ಅವರು ಆಗಮಿಸಿದ್ದರು. ಈ ವೇಳೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅಣ್ಣಾಮಲೈ ಅವರಿಗೆ ವಿಶೇಷ ಗೌರವ ಅರ್ಪಣೆ ಮಾಡಲಾಯಿತು.
ಅಣ್ಣಾಮಲೈ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ಭಕ್ತರು ಮುಗಿಬಿದ್ದರು. ಕೆಲಹೊತ್ತು ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರೊಂದಿಗೆ ಮಾತನಾಡಿದ ಬಳಿಕ ಅಣ್ಣಾಮಲೈ ಅಲ್ಲಿಂದ ತೆರಳಿದರು.
