Home Crime ಮಂಗಳೂರಿನ ಹಂಪನಕಟ್ಟೆಯಲ್ಲಿ ಗುಜರಿ ಅಂಗಡಿ ಬೆಂಕಿಗಾಹುತಿ…!!

ಮಂಗಳೂರಿನ ಹಂಪನಕಟ್ಟೆಯಲ್ಲಿ ಗುಜರಿ ಅಂಗಡಿ ಬೆಂಕಿಗಾಹುತಿ…!!

ಮಂಗಳೂರು : ಗುಜರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಗುಜರಿ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಗರದ ಹಂಪನಕಟ್ಟೆಯ ಯುನಿವರ್ಸಿಟಿ ಕಾಲೇಜ್ ಮುಂಭಾಗ ಗುಜಿರಿ ಅಂಗಡಿ ಬಳಿ ಇಂದು ಮುಂಜಾನೆ 4 ಘಂಟೆ ಸುಮಾರಿಗೆ ನಡೆದಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿ ಕೊಂಡಿದ್ದು, ಅದರ ಪಕ್ಕದಲ್ಲಿರುವ ಅಂಗಡಿಗೂ ಬೆಂಕಿ ಆವರಿಸಿ ಕೊಂಡಿದೆ. ಬಾರಿ ದೊಡ್ಡ ಪ್ರಮಾಣದಲ್ಲಿ ಬೆಂಕಿಯಿಂದಾಗಿ ಬಾರಿ ಪ್ರಮಾಣದ ಸೊತ್ತು ಹಾನಿಯಾಗಿದೆ.

ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ಆರಿಸುವಲ್ಲಿ ಹರಸಾಹಸ ಪಡಬೇಕಾಯಿತು. ಮೇಲ್ನೋಟಕ್ಕೆ ಗುಜಿರಿ ಅಂಗಡಿಯಲ್ಲಿ ಶಾರ್ಟ್ ಸಕ್ಯೂಟ್ ನಿಂದಾಗಿ ಅನಾಹುತ ನಡೆದಿರಬಹುದು ಎಂದು ಹೇಳಲಾಗಿದೆ.