Home Crime ಉಡುಪಿ : ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ : ಪೊಲೀಸರಿಂದ ದಾಳಿ…!!

ಉಡುಪಿ : ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ : ಪೊಲೀಸರಿಂದ ದಾಳಿ…!!

ಉಡುಪಿ: ನಗರದ ಹೋಟೆಲ್ ನಲ್ಲಿ  ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ನಗರ ಠಾಣೆ ಹಾಗೂ ಮಹಿಳೆ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.

ನಗರದ ಸಮ್ಮರ್ ಪಾರ್ಕ್ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ಆರೋಪಿ ಶರತ್ ಯಾನೆ ಮೊಹಮ್ಮದ್‌ ಪಯಾಜ್ ಎಂಬವನ ಮೇಲೆ ಪ್ರಕರಣ ದಾಖಲಾಗಿದೆ.

ಘಟನೆ ವಿವರ : ದಿನಾಂಕ 24/08/2025 ರಂದು ಮಂಜುನಾಥ ಬಡಿಗೇರ್‌, ಪೊಲೀಸ್‌ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರಿಗೆ ಮೂಡನಿಡಂಬೂರು ಗ್ರಾಮದ ಗೀತಾಂಜಲಿ ಸಿಲ್ಕ್ಸ್‌ ಬಳಿ ಇರುವ ಸಮ್ಮರ್‌ ಪಾರ್ಕ್‌ ಹೋಟೆಲ್‌ನಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಮಾಹಿತಿ ನೀಡಿದಂತೆ ಸಮ್ಮರ್‌ ಪಾರ್ಕ್‌ ಹೋಟೆಲ್‌ಗೆ ಹೋಗಿ ಸ್ವಾಗತಕಾರ ಶ್ರೀನಿವಾಸ ರವರೊಂದಿಗೆ 2 ನೇ ಮಹಡಿಯಲ್ಲಿರುವ ರೂಮ್‌ ನಂಬ್ರ 308 ಕ್ಕೆ ದಾಳಿ ನಡೆಸಿ ರೂಮ್‌ ನಲ್ಲಿ ಇದ್ದ ಒಬ್ಬ ಮಹಿಳೆಯನ್ನು ವಿಚಾರಿಸಿದ್ದು, ಶರತ್‌ @ ಮೊಹಮ್ಮದ್‌ ಫಯಾಜ್‌ ಎಂಬ ವ್ಯಕ್ತಿ ನೊಂದ ಮಹಿಳೆಯನ್ನು ಉಡುಪಿಗೆ ಕೆಲಸ ಕೊಡಿಸುವುದಾಗಿ ದಿನಾಂಕ 19/08/2025 ರಂದು ಕರೆಸಿಕೊಂಡು ರೂಮ್‌ನ್ನು ಬುಕ್‌ ಮಾಡಿಸಿಕೊಟ್ಟು ವೇಶ್ಯಾವಾಟಿಕೆ ದಂಧೆ ನಡೆಸಿ, ಅಕ್ರಮ ಲಾಭ ಪಡೆಯುವ ಉದ್ದೇಶ ಹೊಂದಿರುವುದಾಗಿದೆ.

ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2025 ಕಲಂ: 143, 3(5) BNS, ಕಲಂ: 3,4,5,6 Immoral Traffic ( Prevention) Act 1956 ರಂತೆ ಪ್ರಕರಣ ದಾಖಲಾಗಿರುತ್ತದೆ.