ಮಣಿಪಾಲ: ನಗರದ ಸಮೀಪ ಮಣಿಪಾಲ ಪ್ರೆಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದ ವ್ಯಕ್ತಿ ಜಯಂತ್ ಎಂದು ಗುರುತಿಸಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ಸಂದೇಶ (24), ಕುಂಟವಾಣಿ ಗ್ರಾಮ ಭಟ್ಕಳ ಇವರ ಅಣ್ಣ ಜಯಂತ್ (34) ಇವರು 14 ವರ್ಷದಿಂದ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಪ್ರೆಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಅವನು ಪಿರ್ಯಾದಿದಾರರೊಂದಿಗೆ ಮಣಿಪಾಲದ ಹುಡ್ಕೋ ಕಾಲೋನಿಯಲ್ಲಿ ವಾಸಮಾಡಿಕೊಂಡಿದ್ದು, ಜಯಂತ್ ರವರು ದಿನಾಂಕ 04/10/2025 ರಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯ ನಡುವಿನ ಅವಧಿಯಲ್ಲಿ ಮಣಿಪಾಲದ ರೂಮ್ ನಿಂದ ಹೋದವರು ಹಿರಿಯಡ್ಕ ಪೊಲೀಸ್ ಠಾಣಾ ಸರಹದ್ದಿನ ಮಾಣೈ ಬ್ರಿಡ್ಜ್ ಬಳಿ ಬೈಕ್ ನಿಲ್ಲಿಸಿ ಮನೆಗೆ ವಾಪಾಸ್ಸು ಬಾರದೇ ಕಾಣೆಯಾಗಿರುವುದಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 179/2025 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.