ಕಾಪು: ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದಲ್ಲಿ ಸೆ. 22ರಿಂದ ಅ. 2 ರವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ ನಡೆಯುತ್ತಿದ್ದು, ಅ. 7 ರಂದು ಚಂಡಿಕಾಯಾಗ ಪೂರ್ಣಾಹುತಿ, ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ದೇವಿಯ ಸಾನಿಧ್ಯದಲ್ಲಿ ಪ್ರತೀ ದಿನ ಶ್ರೀ ದೇವಿ ಮಹಾತ್ಮ ಪಾರಾಯಣ, ನವದುರ್ಗಾ ಪೂಜೆ, ಪ್ರಸನ್ನ ಪೂಜೆ, ಗದ್ದಿಗೆ ಪೂಜೆ ಮತ್ತು ಹೂವಿನ ಪೂಜೆ, ಭಜನಾ ಕಾರ್ಯಕ್ರಮ ನಡೆಯಲಿದೆ. ಸೆ. 30 ರಂದು ದುರ್ಗಾಷ್ಟಮಿ, ದುರ್ಗಾನಮಸ್ಕಾರ ಪೂಜೆ, ಆ. 2ರಂದು ವಿಜಯ ದಶಮಿ, ಕಲಶ ವಿಸರ್ಜನೆಗೊಳ್ಳಲಿದೆ.
ಅ. 7ರಂದು ಚಂಡಿಕಾಯಾಗ, ಪೂರ್ಣಾಹುತಿ, ಅನ್ನಸಂತರ್ಪಣೆ ನಡೆಯಲಿದೆ ಎಂದು ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಸಾದ್ ಜಿ. ಶೆಣೈ ಮತ್ತು ಕಾಪು ಪೇಟೆಯ ಹತ್ತು ಸಮಸ್ತರ ಜಂಟಿ ಪ್ರಕಟಣೆಯು ತಿಳಿಸಿದೆ.