Home Karkala News ಕುಕ್ಕುಂದೂರು ನಕ್ರೆ ಪೊಸನೊಟ್ಟು ರಸ್ತೆ ಕಾಮಗಾರಿಗೆ ವಿ ಸುನಿಲ್‌ ಕುಮಾರ್‌ ರವರಿಂದ ಚಾಲನೆ…!!

ಕುಕ್ಕುಂದೂರು ನಕ್ರೆ ಪೊಸನೊಟ್ಟು ರಸ್ತೆ ಕಾಮಗಾರಿಗೆ ವಿ ಸುನಿಲ್‌ ಕುಮಾರ್‌ ರವರಿಂದ ಚಾಲನೆ…!!

ಕಾರ್ಕಳ : ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಆನಂದಿ ಮೈದಾನ ನಕ್ರೆ ಪೊಸನಟ್ಟು ಸಂಪರ್ಕ ರಸ್ತೆ ದುರಸ್ತಿಯ ಬಗ್ಗೆ ಸ್ಥಳೀಯರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ರವರು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 70ಲಕ್ಷ ರೂಪಾಯಿ ಅನುದಾನವನ್ನು ಒದಗಿಸಿ ಮೇ 27 ರಂದು ನಮನಪುರ ಪೊಸನೊಟ್ಟು ಕ್ರಾಸ್ ಬಳಿ ಗುದ್ದಲಿ ಪೂಜೆ ನೆರವೇರಿಸಿ ಕಾಯಿ ಒಡೆದು ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಜ್ಯೋತಿ ನಗರ ಕೊಂಡೇನಾಕ್ಯಾರು ಗುಳಿಗ ಸ್ಥಾನ ರಸ್ತೆ ಕಾಮಗಾರಿಗೆ 55 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರವೀಂದ್ರ ಕುಮಾರ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂತೋನಿ ಡಿಸೋಜಾ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಶಿಮಣಿ ಸಂಪತ್‌, ಪ್ರಶಾಂತ್ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್‌ ಶೆಟ್ಟಿ, ಶೇಖರ್ ಸುವರ್ಣ, ಪ್ರಸಾದ್‌, ಪ್ರಾಣೇಶ್ ಶೆಟ್ಟಿ ಹರೀಶ್ ಕುಂದರ್, ಜಯಕರ ಮಡಿವಾಳ ಮಧುಕರ ಸುವರ್ಣ ಮೊದಲಾದ ಪರಿಸರದ ಪ್ರಮುಖರು ಉಪಸ್ಥಿತರಿದ್ದು ಮಾನ್ಯ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.