Home Crime ಉಡುಪಿ: ಲೋಕೋಪಯೋಗಿ ಕ್ವಾಟ್ರಸ್ ನಲ್ಲಿ‌ ಮತ್ತೆ ಕಳ್ಳತನ : ಲಕ್ಷಾಂತರ ಮೌಲ್ಯದ ಚಿನ್ನ ನಗದು ಕಳವುಗೈದು...

ಉಡುಪಿ: ಲೋಕೋಪಯೋಗಿ ಕ್ವಾಟ್ರಸ್ ನಲ್ಲಿ‌ ಮತ್ತೆ ಕಳ್ಳತನ : ಲಕ್ಷಾಂತರ ಮೌಲ್ಯದ ಚಿನ್ನ ನಗದು ಕಳವುಗೈದು ಎಸ್ಕೇಪ್ ಆದ ಕಳ್ಳರು…!!

ಸಿಸಿ ಟಿವಿಯಲ್ಲಿ ಕಳ್ಳರ ಕರಾಮತ್ತು ಸೆರೆ, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ ಪ್ರಕರಣ

ಉಡುಪಿ: ಪೊಲೀಸ್ ಜ್ಯಾಕೆಟ್ ನಲ್ಲಿ‌ ಬಂದಿದ್ದ ಕಳ್ಳರ ಗ್ಯಾಂಗ್ ವೊಂದು ಮೂರು ಮನೆಯ ಬೀಗ ಒಡೆದು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಉಡುಪಿ ಮಿಷನ್ ಕಂಪೌಂಡ್ ಜಂಕ್ಷನ್ ನಲ್ಲಿ‌ರುವ ಲೋಕೋಪಯೋಗಿ ಕ್ವಾಟ್ರಸ್ ನಲ್ಲಿ‌ ಜುಲೈ 19ರಂದು ರಾತ್ರಿ ನಡೆದಿದೆ.

ಇದೇ ವಸತಿ ಸಮುಚ್ಚಯದ ಆರು ಮನೆಗಳಿಗೆ ಕಳೆದ ವರ್ಷದ ಸೆ.29ರಂದು ಕಳ್ಳರು ನುಗ್ಗಿ ಲಕ್ಷಾಂತರ ರೂ. ವೌಲ್ಯದ ನಗ-ನಗದು ಕಳವು ಮಾಡಿ ಪರಾರಿಯಾಗಿದ್ದರು.

ಉಡುಪಿ ನಗರ ಠಾಣೆಯಿಂದ ಅನತಿ ದೂರದಲ್ಲಿರುವ ಈ ವಸತಿ ಸಮುಚ್ಚಯದಲ್ಲಿ ಒಂಭತ್ತು ತಿಂಗಳ ಅಂತರದಲ್ಲಿ ಇದೀಗ ಮತ್ತೆ ಕಳ್ಳತನ ಆಗಿದೆ. ಈ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಈ ಮಧ್ಯೆ ಮತ್ತೆ ಕಳ್ಳತನ ನಡೆದಿರುವುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.

ಮನೆಯನ್ನೆಲ್ಲ ಜಾಲಾಡಿ ಚಿನ್ನ, ಬೆಳ್ಳಿ, ನಗದು ಹೀಗೆ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳವುಗೈದು ಪರಾರಿಯಾಗಿದೆ. ಸಿಸಿಟಿವಿಯಲ್ಲಿ ‌ಕಳ್ಳರ ಚಹರೆ ಸಹಿತ ಕೃತ್ಯ ಬಯಲಾಗಿದೆ. ಪೊಲೀಸ್ ಜಾಕೆಟ್ ‌ನಲ್ಲಿ ಬಂದ‌ ಮೂವರು ಕಳ್ಳರ ಗ್ಯಾಂಗ್ ಈ ಕೃತ್ಯ ನಡೆಸಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ನಗರ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.