Home Crime ಕುಂದಾಪುರ : ಬಾವಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ…!!

ಕುಂದಾಪುರ : ಬಾವಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವಿವಾಹಿತ ಮಹಿಳೆಯೊಬ್ಬರು ಮಾನಸಿಕ ಖಿನ್ನತೆಗೆ ಒಳಗಾಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆ ದೇವಲ್ಕುಂದ ಗ್ರಾಮದ ಯುವತಿ ಪದ್ಮಾವತಿ ಎಂದು ತಿಳಿದು ಬಂದಿದೆ.

ಪ್ರಕರಣ ವಿವರ : ಪಿರ್ಯಾದಿದಾರ ಆನಂದ (53)ಬಾಳಿಕೆರೆ, ದೇವಲ್ಕುಂದ ಗ್ರಾಮ ಇವರ ಚಿಕ್ಕಮ್ಮನ ಮಗಳಾದ ಪದ್ಮಾವತಿ (39) ಎಂಬವರು ಸುಮಾರು 18 ವರ್ಷಗಳ ಹಿಂದೆ ಕೋಣಿ ನಿವಾಸಿಯಾದ ಮಹಾಬಲ ಎಂಬವರೊಂದಿಗೆ ವಿವಾಹವಾಗಿದ್ದು, ಮಕ್ಕಳಾಗಿರುವುದಿಲ್ಲ. ಇದೇ ವಿಚಾರದಲ್ಲಿ ಪದ್ಮಾವತಿಯವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಮಣಿಪಾಲ ಕೆಂಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಮಾನಸಿಕ ಖಿನ್ನತೆಗೆ ಒಳಗಾದ ನಂತರ ತನ್ನಷ್ಟಕ್ಕೆ ತಾನೇ ಏನೇನೋ ಮಾತನಾಡಿಕೊಂಡು ಆಕಡೆ ಈಕಡೆ ಹೋಗುತ್ತಿದ್ದರು. ಹೀಗಿರುವಾಗ ಪದ್ಮಾವತಿಯವರು ದಿನಾಂಕ:09.08.2025 ರಂದು ರಾತ್ರಿ 09:00 ಗಂಟೆಗೆ ತನ್ನ ತಾಯಿಯೊಂದಿಗೆ ಊಟ ಮಾಡಿ ಮಲಗಿಕೊಂಡಿದ್ದವರು ರಾತ್ರಿ 02:00 ಗಂಟೆ ಸಮಯಕ್ಕೆ ಪದ್ಮಾವತಿಯವರು ಮನೆಯಿಂದ ಬೊಬ್ಬೆ ಹಾಕಿ ಮಾತನಾಡಿಕೊಂಡು ಹೊರಗೆ ಹೋಗಿದ್ದು ,ಈ ಹಿಂದೆ ಇದೇ ರೀತಿ ಹೊರಗೆ ಹೋದವಳು ವಾಪಾಸು ಬರುತ್ತಿದ್ದುದರಿಂದ, ವಾಪಾಸು ಬರಬಹುದೆಂದು ಅವರ ತಾಯಿ ಈ ವಿಚಾರವನ್ನು ಯಾರಿಗೂ ಹೇಳಿರುವುದಿಲ್ಲ. ಬೆಳಗಾದರೂ ಮಗಳು ವಾಪಾಸು ಬಾರದೇ ಇರುವುದರಿಂದ ಬೆಳಿಗ್ಗೆ 07:00 ಗಂಟೆ ಸುಮಾರಿಗೆ ಅಕ್ಕಪಕ್ಕದವರಲ್ಲಿ ವಿಚಾರ ತಿಳಿಸಿರುತ್ತಾರೆ. ಪಿರ್ಯಾದಿದಾರರಿಗೆ ವಿಚಾರ ತಿಳಿದು ಪದ್ಮಾವತಿಯವರನ್ನು ಹುಡುಕಾಡಲಾಗಿ ಪದ್ಮಾವತಿಯವರುಪಕ್ಕದ ಮನೆಯ ಗಣಪಯ್ಯ ಎಂಬವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ ಕ್ರಮಾಂಕ 25/2025 ಕಲಂ:194 ಬಿ ಎನ್ ಎಸ್ ಎಸ್ 2023 ರಂತೆ ಪ್ರಕರಣ ದಾಖಲಿಸಿರುವುದಾಗಿದೆ.