ಅಜೆಕಾರು: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅಜೆಕಾರು ಪೊಲೀಸರು ಸೆ.27ರಂದು ಮಧ್ಯಾಹ್ನ ವೇಳೆ ಕಾಡುಹೊಳೆ ಅಂಡಾರು ರಸ್ತೆಯ ಕೊಂದ ಎಂಬಲ್ಲಿ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಆಯನೂರು ತಮ್ಮಡಿಹಳ್ಳಿಯ ರಂಗನಾಥ (32) ಹಾಗೂ ಶಿರ್ಲಾಲು ಗ್ರಾಮದ ಪಡ್ಡಾಯಿಮಾರುವಿನ ಸುಂದರ(57) ಬಂಧಿತ ಆರೋಪಿಗಳು.
ಇವರು ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಅಂಡಾರು ಕಡೆಯಿಂದ ಹೆಬ್ರಿ ಕಡೆ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿಯಂತೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳು ಅಂಡಾರು ಗರಡಿಯ ಬಳಿಯಿಂದ ಕಳವು ಮಾಡಿ ಸಾಗಾಟ ಮಾಡುತ್ತಿದ್ದ 32 ಸಾವಿರ ರೂ. ಮೌಲ್ಯದ ಎರಡು ದನಗಳನ್ನು ಹಾಗೂ 5 ಲಕ್ಷ ರೂ. ಮೌಲ್ಯದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.