ಉಡುಪಿ : ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆ ಪ್ರಕರಣದ ಮೂವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ನಂತರ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಎಕೆಎಂಎಸ್ ಬಸ್ ಚಾಲಕ ಅಬ್ದುಲ್ ಶುಕೂರು, ಫೈಝಲ್ ಹಾಗೂ ಶರೀಫ್ ಶರಣಾದ ಆರೋಪಿಗಳು ಎಂದು ಗುರುತಿಸಲಾಗಿದೆ.
ಈ ಮೂವರು ಆರೋಪಿಗಳು ಕೂಡಾ ಸೈಫುದ್ದೀನ್ ನ ಸಹಚರರು. ಜೊತೆಗಿದ್ದವರಿಗೇ ಸುಪಾರಿ ನೀಡಿ ಕೊಲೆ ಮಾಡಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮಲ್ಪೆ ಠಾಣಾ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.ಇನ್ನೋರ್ವ ಈ ಪ್ರಕರಣದ ಭಾಗಿಯಾಗಿದ್ದ ಎನ್ನಲಾಗಿದೆ.
ಸೆ. 27ರ ಬೆಳಗ್ಗೆ 10 ರಿಂದ 11 ಗಂಟೆ ಸುಮಾರಿಗೆ ಕೊಡವೂರಿನ ಮನೆಯೊಂದರಲ್ಲಿ ಸೈಫುದ್ದೀನ್‌ನನ್ನು ಮೂವರು ಸೇರಿ ಮಾರಕಾಸ್ತ್ರ ಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಆರೋಪಿಗಳು ಪೊಲೀಸ್ ಠಾಣೆಗೆ ಹೋದ ನಂತರ ಸೈಪುದ್ದೀನ್ ಕೊಲೆ ವಿಚಾರ ಬೆಳಕಿಗೆ ಬಂದಿದೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿ ಶರಣಾಗಿರುವ ಮೂವರು ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದ್ದು, ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಸತ್ಯಾಂಶ ತಿಳಿದು ಬರಬೇಕಿದೆ.
ಸೈಪುದ್ದೀನ್ ಸುಮಾರು ವರ್ಷಗಳ ಹಿಂದೆ ಆತ್ರಾಡಿಯಲ್ಲಿ ನಡೆದಿದ್ದ ಪುಂಡಲಿಕಾ ಎಂಬವನ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ನಂತರ ಕೆಲವು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ರೌಡಿ ಶೀಟರ್ ಆಗಿದ್ದ. ನಾಲ್ಕು ವರ್ಷಗಳ ಹಿಂದೆ ಮಣಿಪಾಲದ ಸೈಫ್ ಕಚೇರಿಯಲ್ಲಿ ಆತನ ಮೇಲೆ ಕೊಲೆ ಪ್ರಕರಣ ಯತ್ನ ನಡೆದಿತ್ತು.






