Home Crime ಉಡುಪಿ : ಆರೋಪಿಯೋರ್ವ ಆತ್ಮಹತ್ಯೆಗೆ ಯತ್ನ…!!

ಉಡುಪಿ : ಆರೋಪಿಯೋರ್ವ ಆತ್ಮಹತ್ಯೆಗೆ ಯತ್ನ…!!

ಉಡುಪಿ: ನಗರದ ಮಹಿಳೆ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬ  ವಾಶ್ ರೂಮ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ರಕ್ಷಿತ್ ಶೆಟ್ಟಿ ಎಂದು ತಿಳಿದು ಬಂದಿದೆ.

ಪ್ರಕರಣ ವಿವರ : ದಿನಾಂಕ :22/09/2025 ರಂದು ಉಡುಪಿ ಮಹಿಳಾ ಪೊಲೀಸ್ ಠಾಣಾ ಅ.ಕ್ರ 43/2025 ರಲ್ಲಿನ 2ನೇ ಆರೋಪಿ ರಕ್ಷಿತ್ ಶೆಟ್ಟಿ (22) ರವರನ್ನು ತನಿಖೆಯ ಬಗ್ಗೆ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1,ಉಡುಪಿ ದಿಂದ ಪೊಲೀಸ್ ಅಭಿರಕ್ಷೆಗೆ ಪಡೆದುಕೊಂಡಿದ್ದು, ದಿನಾಂಕ : 23/09/2025 ರಂದು ಬೆಳಗ್ಗೆ 7:30 ಗಂಟೆಗೆ ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ರಕ್ಷಿತ್ ಶೆಟ್ಟಿಯು ತನಗೆ ವಾಶ್‌ ರೂಮಿಗೆ ಹೋಗಬೇಕೆಂದು ಗಾರ್ಡ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳಲ್ಲಿ ಕೇಳಿಕೊಂಡಿದ್ದು, ಅದಕ್ಕೆ ಪೊಲೀಸ್ ಸಿಬ್ಬಂದಿಯವರು ಅರೋಪಿಯನ್ನು ಕರೆದುಕೊಂಡು ಹೋಗಿದ್ದು, ಆ ಸಮಯದಲ್ಲಿ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಆರೋಪಿಯು ತನ್ನ ಮೇಲಿನ ಎರಡು ಪ್ರಕರಣದಲ್ಲಿ ತನಿಖೆಗೆ ಒಳಗಾಗಬೇಕೆಂಬ ನಿಟ್ಟಿನಲ್ಲಿ ಪ್ರಕರಣದ ತನಿಖೆಯನ್ನು ಮೊಟಕುಗೊಳಿಸುವರೇ ಮತ್ತು ತನಿಖೆಗೆ ಅಡ್ಡಿಯಾಗುಂಟುವಂತೆ ಮಾಡಲು ಬದಿಯಲ್ಲಿದ್ದ ಟಾಯಲೆಟ್ ಕ್ಲೀನ್ ಮಾಡಲು ಉಪಯೋಗಿಸಲಿಟ್ಟಿದ್ದ HARPIC ಎಂಬ ರಾಸಯನಿಕ ಪದಾರ್ಥವನ್ನು ಸೇವನೆ ಮಾಡಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿರುತ್ತಾನೆ.

ಈ ಬಗ್ಗೆ ಸುಜಾತ ಸಾಲ್ಯಾನ್,ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್ ಠಾಣೆ ಇವರ ದೂರಿನಂತೆ ಉಡುಪಿ ಮಹಿಳಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 177/2025, ಕಲಂ: 226 BNS ರಂತೆ ಪ್ರಕರಣ ದಾಖಲಾಗಿರುತ್ತದೆ.