ಬೈಂದೂರು : ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ತಾಲೂಕು ಆಡಳಿತ ಕಛೇರಿ ಎದುರುಗಡೆ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ನಾಲ್ಕನೆ ದಿನ ತಲುಪಿದೆ.
ಇಂದು ಅತ್ಯಾಡಿ,ಕೊಸಳ್ಳಿ.ಕುಳ್ಳಂಕಿ ,ಸಾರಂಕಿ.ಸುತ್ತಮುತ್ತಲಿನ ನೂರಾರು ರೈತರು ನೇತ್ರತ್ವ ವಹಿಸಿದ್ದರು.
ಧರ್ಮಗುರು ಸನ್ನಿಫಾದರ್ ಮಾತನಾಡಿ ರೈತ ಸಂಘದ ವತಿಯಿಂದ ನಡೆಯುತ್ತಿರುವ ಈ ಧರಣಿ ರಾಜ್ಯ ಮಟ್ಟದವಗೆ ಸಂಚಲನ ಮೂಡಿಸಿದೆ.ದಿನದಿಂದ ದಿನಕ್ಕೆ ಬೆಂಬಲಿಸುವರ ಸಂಖ್ಯೆ ಹೆಚ್ಚುತ್ತಿದ್ದು ಕಾವು ಏರುವ ಮುನ್ನ ಸರಕಾರ ಶೀಘ್ರ ರೈತರ ಬೇಡಿಕೆ ಈಡೇರಿಸಬೇಕು ಎಂದರು.
ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ.ಪ ಪಂ ನಾಮನಿರ್ದೇಶಿತ ಸದಸ್ಯ ರಾಜು ಪೂಜಾರಿ. ಅರವಿಂದ ಪೂಜಾರಿ ಸುಬ್ರಹ್ಮಣ್ಯ ಪೂಜಾರಿ .ನರಸಿಂಹ ಹಳಗೇರಿ ,ವೆಂಕಟರಮಣ ಹೇನ್ ಬೇರು .ಗೋಳಿಹೊಳೆ ಗ್ರಾ ಪಂ ಅಧ್ಯಕ್ಷ ವಸಂತ ಹೆಗ್ಡೆ ಧ ಗ್ರಾ ಯೋ ಬೈಂದೂರು ತಾಲೂಕು ಅಧ್ಯಕ್ಷ ವಾಸು ಮೇಸ್ತ ಗಣೇಶ ಪೂಜಾರಿ ಬೈಂದೂರು ಸೇರಿದಂತೆ ಹಲವು ಸಂಘ ಸಂಸ್ಥೆ ಗಳ ಮುಖಂಡರು ಭಾಗವಹಿಸಿದ್ದರು
ಶುಕ್ರವಾರ ವಿಶೇಷ ಸಾಮೂಹಿಕ ಪ್ರಾರ್ಥನೆ
ಆದಷ್ಟು ಶೀಘ್ರವಾಗಿ ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ನಿಂದ ಮುಕ್ತಿ ನೀಡಬೇಕೆಂದು ರೈತ ಸಂಘ ಶುಕ್ರವಾರ ಕೊಲ್ಲೂರು ಮುಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಲಿದ್ದು ಈ ಸಂಧರ್ಭದಲ್ಲಿ ಬೈಂದೂರು ಗ್ರಾಮೀಣ ಭಾಗದ ಪ್ರತಿ ಊರುಗಳ ಗುಡಿ ದೇವಸ್ಥಾನ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ.
ನಿರಂತರ ವಾಗಿ ನಡೆಯುತ್ತಿರುವ ರೈತಸಂಘದ ಧರಣಿಗೆ ಉತ್ತಮ ಜನಬೆಂಬಲ ವ್ಯಕ್ತವಾಗಿದ್ದು ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮೀಣ ಭಾಗದ ಸಮೀಕ್ಷೆ ಮಾಹಿತಿ ಪಡೆದು ವರದಿ ಸಿದ್ದಪಡಿಸಿದ್ದಾರೆ.
ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಇಂದಿನ ಧರಣಿಗೆ ಚಾಲನೆ ನೀಡಿದರು.ವೀರಭದ್ರ ಗಾಣಿಗ ಸ್ವಾಗತಿಸಿ ಅರುಣ ಕುಮಾರ ಶಿರೂರು ಪ್ರಸ್ತಾವಿಕ ಮಾತುಗಳನ್ನಾಡಿದರು.
