Home Crime 80 ಬಡಗಬೆಟ್ಟು ಕಾರ್ಯಕ್ರಮದಲ್ಲಿ ಡಿಸಿ ಆದೇಶ ಉಲ್ಲಂಘನೆ : ಶಾಸಕರು, ಸಂಸದ ಸೇರಿ 37 ಮಂದಿಗೆ...

80 ಬಡಗಬೆಟ್ಟು ಕಾರ್ಯಕ್ರಮದಲ್ಲಿ ಡಿಸಿ ಆದೇಶ ಉಲ್ಲಂಘನೆ : ಶಾಸಕರು, ಸಂಸದ ಸೇರಿ 37 ಮಂದಿಗೆ ಎಫ್‌ಐಆರ್…!!

ಉಡುಪಿ: ತಹಶೀಲ್ದಾರ್ ಗುರುರಾಜ್ ಅವರ ದೂರಿನ ಮೇರೆಗೆ 80 ಬಡಗಬೆಟ್ಟು ಗ್ರಾಮದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿ ಡಿಸಿ ಆದೇಶ ಉಲ್ಲಂಘನೆ ಹಾಗೂ ಕ್ರಿಮಿನಲ್ ಟ್ರೆಸ್ಪಾಸ್ ಆರೋಪದಡಿ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟು 37 ಮಂದಿ ಪರಿಚಿತ ಆರೋಪಿಗಳು ಹಾಗೂ ಇತರ ಅಜ್ಞಾತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳ ಪಟ್ಟಿಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಕುಂದಾಪುರ ಕ್ಷೇತ್ರದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ, ಎಂಎಲ್ಸಿ ಧನಂಜಯ್ ಸರ್ಜಿ, ಸಂಸದ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವರು ಸೇರಿದ್ದಾರೆ.

ಜೊತೆಗೆ ಲಾಲಾಜಿ ಆರ್ ಮೆಂಡನ್ (ಮಾಜಿ ಶಾಸಕ), ಮತ್ತಿತರ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಹೆಸರುಗಳೂ ಎಫ್‌ಐಆರ್‌ನಲ್ಲಿ ಉಲ್ಲೇಖಗೊಂಡಿವೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.