ಬೆಳ್ತಂಗಡಿ : ಕುಡ್ಲ ರಾಂಪೇಜ್ ಯುಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡುವ ವೇಳೆ ಜೈನ ಧರ್ಮದ ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ದಾಖಲಾಗಿದ್ದ ದೂರನ್ನು ಬೆಳ್ತಂಗಡಿಗೆ ವರ್ಗಾಯಿಸಲಾಗಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಗಿರೀಶ ಮಟ್ಟಣ್ಣವರ್ ಇವರು ಜೈನ ಧರ್ಮಕ್ಕೆ ಮತ್ತು ಜೈನ ಧರ್ಮೀಯರ ಭಾವನೆಗಳಿಗೆ ಅವಮಾನಪಡಿಸುವ ಉದ್ದೇಶದಿಂದ ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಜೈನ ಧರ್ಮಕ್ಕೆ ಅಪಮಾನವಾಗುವ ರೀತಿಯಲ್ಲಿ ಸಂದರ್ಶನ ನೀಡಿದ್ದು, ಅಲ್ಲದೇ ಕುಡ್ಲ ರಾಂಪೇಜ್ ಚಾನೆಲ್ ಮಾಲೀಕರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಆಪಾಧಿತರಿಬ್ಬರೂ ಜೈನ ಧರ್ಮೀಯರ ಧಾರ್ಮೀಕ ಭಾವನೆಗಳಿಗೆ ಅಪಮಾನಪಡಿಸಿದಾರೆಂದು ಪಿರ್ಯಾದಿದಾರರಾದ ಅಜಿತ್ ನಾಗಪ್ಪ ಬಸಾಪುರ್ (32) ಹುಬ್ಬಳ್ಳಿ ರವರು ನೀಡಿದ ದೂರಿನಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನೀಡಿದ ದೂರನ್ನು ಸರಹದ್ದಿನ ಆದಾರದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದನ್ನು ಮತ್ತು ಮಂಜುನಾಥ ಜಕ್ಕಣ್ಣವರ ಪ್ರಾಯ 42 ಧಾರವಾಡ ರವರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನೀಡಿದ ಪಿರ್ಯಾದಿಯಲ್ಲಿನ ಘಟನೆಯು ಒಂದೇ ಆಗಿರುತ್ತದೆ, ಈ ಬಗ್ಗೆ ದೂರುದಾರರು ನೀಡಿದ ಹೇಳಿಕೆಯನ್ನು ದಾಖಾಲಿಸಿಕೊಂಡು ದಿನಾಂಕ 12-08-2025 ರಂದು ಬೆಳ್ತಂಗಡಿ ಠಾಣಾ ಅಕ್ರ: 86/2025 ಕಲಂ.196(1) (ಎ) 299 ಬಿ.ಎನ್.ಎಸ್. 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.