ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಗೆಳೆಯರ ಬ್ಲ್ಯಾಕ್ ಮೇಲ್ ಒತ್ತಡ ತಾಳಲಾರದೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ಣಿನ ಖಾಸಗಿ ಲಾಡ್ಜ್ ನಲ್ಲಿ ಸಂಭವಿಸಿದೆ
ಮೃತ ಯುವಕನನ್ನು ನಿಟ್ಟೆ ಗ್ರಾಮದ ಅಭಿಷೇಕ್ (23) ಎಂದು ಗುರುತಿಸಲಾಗಿದೆ .
ಪ್ರೀತಿಸಿದ ಯುವತಿ ಜತೆಗಿದ್ದ ಖಾಸಗಿ ವಿಡಿಯೋವನ್ನು ವೈರಲ್ ಮಾಡುವುದಾಗಿ ಗೆಳೆಯರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಡೆತ್ ನೋಟ್ ನಲ್ಲಿ ನಾಲ್ವರು ಬ್ಲ್ಯಾಕ್ ಮೇಲ್ ಮಾಡಿದವರ ಹೆಸರು ಉಲ್ಲೇಖಿತವಾಗಿದೆ . ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಮೃತ ಯುವಕನ ಮೊಬೈಲ್ ಮತ್ತು ತಾಂತ್ರಿಕ ಆಯಾಮದಲ್ಲಿ ಪರಿಶೀಲನೆ ನಡೆಯುತ್ತಿದೆ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಹೆಸರಿಸಿದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.