ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಬೇಲೂರು ಮೂಲದ ಯುವಕ ಮೃತಪಟ್ಟ ಘಟನೆ ನಿಡಳ್ಳಿ ಗ್ರಾಮದ ಬೋಳುಂಬುಡೆಯಲ್ಲಿ ನಡೆದಿದೆ.
ಮೃತ ಯುವಕ ಬೇಲೂರಿನ ಅಂಕಿಹಳ್ಳಿ ನಿವಾಸಿ ಜೋಕಿಂ ಪಿಂಟೋ ಅವರ ಪುತ್ರ ರೋಶನ್ ಪಿಂಟೋ (29) ಎಂದು ತಿಳಿದು ಬಂದಿದೆ.
ಜೋಕಿಂ ಅವರು ಪತ್ನಿ, ಇಬ್ಬರು ಮಕ್ಕಳೊಂದಿಗೆ ಮಾವನ ಮನೆ ನಿಡಳ್ಳಿಯ ಬೋಳುಂಬುಡೆಗೆ ಬಂದಿದ್ದರು. ರೋಶನ್ ರಾತ್ರಿ ಸ್ನಾನ ಮುಗಿಸಿ ಬಟ್ಟೆ ಒಗೆಯುವ ಸ್ಥಳಕ್ಕೆ ಹೋದಾಗ ಅಲ್ಲಿದ್ದ ವಿದ್ಯುತ್ ವಯರ್‌ನಿಂದ ಶಾಕ್ ಹೊಡೆದು ನೆಲಕ್ಕೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ರೋಶನ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ರಜೆಗೆ ಊರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.




