Home Crime ಬ್ರಹ್ಮಾವರ : ವ್ಯಕ್ತಿಯೋರ್ವರು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು‌ ಆತ್ಮಹತ್ಯೆ….!!

ಬ್ರಹ್ಮಾವರ : ವ್ಯಕ್ತಿಯೋರ್ವರು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು‌ ಆತ್ಮಹತ್ಯೆ….!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ವ್ಯಕ್ತಿಯೋರ್ವರು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತಪಟ್ಟವರು ಮೋಹನ್ ಎಂದು ತಿಳಿದು ಬಂದಿದೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಶಿವ (56), ಆರೂರು ಗ್ರಾಮ, ಬ್ರಹ್ಮಾವರ ಇವರ‌ ತಮ್ಮ ಮೋಹನ್‌ (47) ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲದೇ ಮದುವೆಯಾಗದೇ ಇದ್ದು, ಅಥವಾ ಇನ್ಯಾವುದೋ ಕಾರಣದಿಂದ ಜೇವನದ ಜಿಗುಪ್ಸೆಗೊಂಡು ದಿನಾಂಕ 18/09/2025 ರಂದು 16:00 ಗಂಟೆಯಿಂದ ದಿನಾಂಕ 20/09/2025 ರಂದು ಸಂಜೆ 16:30 ಗಂಟೆಯ ಮಧ್ಯಾವಧಿಯಲ್ಲಿ, ಆರೂರು ಗ್ರಾಮದ ಮೇಲಡ್ಪು ಸುಬ್ರಾಯ ಮಾಸ್ಟರ್‌ ಅವರ ಹಾಡಿಯಲ್ಲಿರುವ ದೂಪದ ಮರಕ್ಕೆ ಸುಮಾರು 30 ಅಡಿಯಷ್ಟು ಎತ್ತರಕ್ಕೆ ಹತ್ತಿ ಅಲ್ಲಿ ಒಂದು ನೈಲಾನ್‌ ಹಗ್ಗದಿಂದ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 65/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.