ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಯುವಕನೋರ್ವನಿಗೆ ನಾಲ್ಕು ಮಂದಿ ಸೇರಿ ಮರದ ರೀಪಿನಿಂದ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.
ಕುಕ್ಕಂದೂರು ಗ್ರಾಮದ ಸುರೇಶ್ ಎಂಬವನಿಗೆ ಹಲ್ಲೆಯಾಗಿದೆ.
ಹಲ್ಲೆ ನಡೆಸಿದ ಆರೋಪಿಗಳು 1. ಶಿವರಾಜ್, 2.ಶಶಿಕಿರಣ, 3.ಹೇಮಂತ್, 4.ವಿಜೇಶ್ ಎಂದು ಗುರುತಿಸಲಾಗಿದೆ.
ಕಾರ್ಕಳ ಪೊಲೀಸ್ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಮುಂದುವರೆಸಿದ್ದಾರೆ.
ಪ್ರಕರಣದ ಸಾರಾಂಶ : ಆರೋಪಿತರಾದ 1. ಶಿವರಾಜ್, 2.ಶಶಿಕಿರಣ, 3.ಹೇಮಂತ್, 4.ವಿಜೇಶ್, ಇವರು , ದಿನಾಂಕ 23/11/2025 ರಂದು ಬೆಳಗಿನ ಜಾವ 01:00 ಗಂಟೆಗೆ ಪಿರ್ಯಾದಿದಾರರಾದ ಸುರೇಶ್ (28) ತಂದೆ; ಸೆಲ್ವರಾಜ್ ವಾಸ; ಪೊಸನೊಟ್ಟು 05 ಸೆಂಟ್ಸ್ ನಕ್ರೆ ಕುಕ್ಕಂದೂರು ಗ್ರಾಮ ಕಾರ್ಕಳ ಇವರ ವಾಸದ ಮನೆಯ ಬಳಿ ಬಂದು ಪಿರ್ಯಾದಿದಾರರನ್ನು ಮನೆಯಿಂದ ಹೊರಗೆ ಕರೆದು ಅವಾಚ್ಯ ಶಬ್ದಗಳಿಂದ ಬೈದು ನೀನು ಕಳ್ಳತನ ಮಾಡುತ್ತೀಯಾ ಎಂದು ಹೇಳಿ ಆರೋಪಿ ಶಿವರಾಜ್ ಈತನು ಮರದ ರೀಪಿನಿಂದ ಬೆನ್ನಿಗೆ ಕೈ ಕಾಲುಗಳಿಗೆ ಹಲ್ಲೆ ಮಾಡಿರುತ್ತಾನೆ ಅಲ್ಲದೇ ಉಳಿದ ಆರೋಪಿಗಳು ಸೇರಿ ಪಿರ್ಯಾದುದಾರರನ್ನು ಗಟ್ಟಿಯಾಗಿ ಹಿಡಿದುಕೊಂಡು ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ ಇದರ ಪರಿಣಾಮ ಪಿರ್ಯಾದುದಾರರಿಗೆ ವಿಪರೀತ ನೋವುಂಟಾಗಿದ್ದು ದಿನಾಂಕ 26/11/2025 ರಂದು ಕಾರ್ಕಳ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 167/2025 ಕಲಂ : 118(1) 115(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.



