ಮೂಡುಬೆಳ್ಳೆ: ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ಮೂಡುಬೆಳ್ಳೆ.( ಜೆ.ಐ.ಇ.ಸಿ.ಕೋ ಆಪರೇಟಿಂಗ್ ಸೊಸೈಟಿ ಉಡುಪಿ ಇದರ ಅಂಗಸಂಸ್ಥೆ) ಇಲ್ಲಿ ವಿದ್ಯಾರ್ಥಿ ಸಂಘ 2026-27 ಇದರ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟಿಸಿದ ಶ್ರೀಯುತ ಯು.ಎಲ್.ಭಟ್ ವಿಶ್ರಾಂತ ಪ್ರಾಂಶುಪಾಲರು ಇವರು ವಿದ್ಯಾರ್ಥಿ ಸಂಘದ ಪದಾದಿಕಾರಿಗಳಾದ ವಿದ್ಯಾರ್ಥಿಗಳು
ಉತ್ತಮ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು , ಪರಿಶ್ರಮದಿಂದ ಸಾಧನೆ ಮಾಡಬೇಕು. ಉತ್ತಮ ಅಂಕ ಪಡೆದು ಎಂದು ಮಕ್ಕಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಯಾಡಿದ ಶ್ರೀ ಪ್ರಭಾಕರ್ ಕೆ ಎಸ್ ಪ್ರಭಾರ ಕಾರ್ಯದರ್ಶಿ ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಇವರು ವಿದ್ಯಾಭ್ಯಾಸದೊಂದಿಗೆ ಜವಾಬ್ದಾರಿ ಹೊಂದಿ, ಪರಿಶ್ರಮದಿಂದ ಶಿಸ್ತಿನಿಂದ, ನಿಮ್ಮ ಜೀವನದಲ್ಲಿ ಒಳ್ಳೆಯ ಸ್ಥಾನಮಾನ ಪಡೆದು ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಿ ಎಂದು ಹೇಳಿದರು.
2026-27 ನೇ ಸಾಲಿನ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳನ್ನು ಬಿರುದು ಪಟ್ಟಿ ಹಾಕುವ ಮೂಲಕ ಗೌರವ ಸೂಚಿಸಲಾಯಿತು. ಉಪ ಪ್ರಾಂಶುಪಾಲರಾದ ಶ್ರೀ ಭಾಸ್ಕರ ಆಚಾರ್ಯ ಇವರು ಪ್ರಮಾಣ ವಚನ ಭೋದಿಸಿದರು.
ನಮ್ಮ ಕಾಲೇಜಿನ ನೂತನ ನಾಯಕರಾದ ವಾಣಿಜ್ಯ ವಿಭಾಗದ ಆಸ್ಟನ್ ಸೆಲ್ವಿನ್ ಡಿ’ಸೋಜಾ ಹಾಗೂ ವಿಜ್ಞಾನ ವಿಭಾಗದ ನವ್ಯ ವಸಂತ್ ಶೆಟ್ಟಿ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀನಾ ಎಸ್ ನಾಯ್ಕ್ ಇವರು ಆಗಮಿಸಿದ ಸರ್ವರನ್ನು ಸ್ವಾಗತಿಸಿ ವಿಧ್ಯಾರ್ಥಿ ಸಂಘದಲ್ಲಿ ನಡೆಯಬೇಕಾದ ಕಾರ್ಯಕ್ರಮಗಳ ಕುರಿತು ತಿಳಿಸಿದರು.
ನಮ್ಮ ಕಾಲೇಜಿನ ನೂತನ ನಾಯಕನಾದ ವಾಣಿಜ್ಯ ವಿಭಾಗದ ಆಸ್ಟನ್ ಸೆಲ್ವಿನ್ ಡಿ’ಸೋಜಾ ಆಗಮಿಸಿದ ಸರ್ವರನ್ನು ವಂದಿಸಿದರು.
ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ದೇವತಾ ಪ್ರಾರ್ಥನೆ ಸಲ್ಲಿಸಿದರು.
ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಶ್ರಾವ್ಯ ಹಾಗೂ ಕ್ಷಮಾ ಕಾರ್ಯಕ್ರಮದ ನಿರೂಪಣೆ ಮಾಡಿದರು
ವರದಿ ಅನಿಲ್ ಮೂಡುಬೆಳ್ಳೆ





