Home Crime ಶ್ರೀ ಶಕ್ತಿ ಸಂಘದಲ್ಲಿ ಲಕ್ಷಾಂತರ ವಂಚನೆ : ಮಹಿಳೆಯ ವಿರುದ್ಧ ದೂರು ದಾಖಲು…!!

ಶ್ರೀ ಶಕ್ತಿ ಸಂಘದಲ್ಲಿ ಲಕ್ಷಾಂತರ ವಂಚನೆ : ಮಹಿಳೆಯ ವಿರುದ್ಧ ದೂರು ದಾಖಲು…!!

ಹಿರಿಯಡ್ಕ: ಉಡುಪಿ ಜಿಲ್ಲೆಯ ಪೆರ್ಡೂರು ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ(ರಿ) ಶ್ರೀ ಶಕ್ತಿ ಸಂಘದಲ್ಲಿ ಮುಖ್ಯ ಬರಹಗಾರರಾಗಿ‌ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು‌ ಸಂಘದ ಲಕ್ಷಾಂತರ ರೂಪಾಯಿ ಹಣವನ್ನು ನಕಲಿ ಸಹಿ‌ ಮಾಡಿ ಬ್ಯಾಂಕ್ ನಿಂದ ತೆಗೆದು ವಂಚನೆ ‌ಮಾಡಿದ ಘಟನೆ ನಡೆದಿದೆ

ಸುಗಂಧಿ ಎಂಬವಳ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.

ಹಿರಿಯಡ್ಕ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪಗರಕರಣದ ವಿವರ: ಪಿರ್ಯಾದಿದಾರರಾದ ಶ್ಯಾಮಲಾ ಎಸ್.ಪಿ ಇವರು ಪೆರ್ಡೂರು ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ(ರಿ) ಶ್ರೀ ಶಕ್ತಿ ಸಂಘದಲ್ಲಿ ಅಧ್ಯಕ್ಷ್ಯರಾಗಿದ್ದು ಆರೋಪಿತ ಸುಗಂಧಿ ಅದೇ ಸಂಘದಲ್ಲಿ ಮುಖ್ಯ ಬರಹಗಾರರಾಗಿ ಕೆಲಸ ಮಾಡಿರುತ್ತಾರೆ. ಸಂಘ ದಿನಾಂಕ 19/10/2020 ರಂದು ಅಸ್ಥಿತ್ವಕ್ಕೆ ಬಂದಿದ್ದು ಸೊಸೈಟಿ ಆಕ್ಟ್ ಪ್ರಕಾರ ನೋಂದಣಿ ಆಗಿರುತ್ತದೆ. ಒಕ್ಕೂಟದಲ್ಲಿ ಒಟ್ಟು 68 ಸ್ವಸಹಾಯ ಗುಂಪುಗಳು 632 ಸದಸ್ಯರು ಇದ್ದು ಬೇರೆ ಬೇರೆ ಕಾರ್ಯ ಕ್ರಮಗಳ ಅನುಷ್ಠಾನಕ್ಕಾಗಿ ಒಕ್ಕೂಟದ ಖಾತೆಗೆ ಸರಕಾರದಿಂದ ಇದುವರೆಗೆ 42,00,000/- ರೂಪಾಯಿ ಹಣ ಬಿಡುಗಡೆ ಆಗಿದ್ದು ಅದರಲ್ಲಿ ಜೀವನೋಪಾಯ ಚಟುವಟಿಕೆ ಪ್ರಾರಂಭಿಸಲು ಸಾಲದ ರೂಪದಲ್ಲಿ ಶೇಕಡಾ 9 ಬಡ್ಡಿಯೊಂದಿಗೆ ಸ್ವ ಸಹಾಯ ಸಂಘದ ಸದಸ್ಯರಿಗೆ ಸರಕಾರದ ನಿಯಮಾನುಸಾರ ಸಾಲ ವಿತರಿಸಬೇಕಾಗಿರುತ್ತದೆ. ಹಾಗೂ ಅಧ್ಯಕ್ಷ್ಯರು, ಕಾರ್ಯದರ್ಶಿ, ಕೋಶಾಧಿಕಾರಿಯವರ ಮುಖಾಂತರ ಬ್ಯಾಂಕ್ ಖಾತೆಯನ್ನು ನಿರ್ವಹಣೆ ಮಾಡಲಾಗುತ್ತದೆ. ದಾಖಲಾತಿ ನಿರ್ವಹಣೆ ಮುಖ್ಯ ಬರಹಗಾರರ ಜವಾಬ್ದಾರಿ ಆಗಿದೆ. ಆರೋಪಿತಳು 2023 ನೇ ಸಾಲಿನಿಂದ 2025 ಡಿಸೆಂಬರ್ ತಿಂಗಳ ನಡುವಿನ ಅವದಿಯಲ್ಲಿ ವಿವಿಧ ಶ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಸಾಲ ನೀಡಿದನ್ನು ಸದಸ್ಯರು ಮರು ಪಾವತಿಸಲು ಮಾಡಿದ ಹಣವನ್ನು ಸಂಘದ ಜಮಾ ಪುಸ್ತಕದಲ್ಲಿ ಸಂಬಂದಿಸಿದ ಖಾತೆಗೆ ಜಮಾ ಮಾಡದೆ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಲ್ಲದೆ ಕೆಲ ಸದಸ್ಯರ ಬೇಡಿಕೆ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ನಮೂದಿಸಿ ಅದ್ಯಕ್ಷ್ಯರು ಕಾರ್ಯದರ್ಶಿಯವರ ನಕಲಿ ಸಹಿ ಮಾಡಿ ನಕಲಿ ದಾಖಲೆ ಸೃಷ್ಠಿಸಿ ಅವು ಅಸಲಿ ಅಂತ ಬ್ಯಾಂಕಿಗೆ ಸಲ್ಲಿಸಿ ಸಾಲ ಮಂಜೂರಿಸಿಕೊಂಡು ಬೇಡಿಕೆ ಇದ್ದಷ್ಟು ಹಣವನ್ನು ಸದಸ್ಯರಿಗೆ ನೀಡಿ ಉಳಿದ ಹಣವನ್ನು ತನ್ನ ಸಂತಕ್ಕೆ ಬಳಿಸಿಕೊಂಡಿದಲ್ಲದೆ ಕಾರ್ಯಕಾರಿ ಸಮಿತಿಗೆ ತೋರಿಸಲೆಂದು ಪ್ರತ್ಯೇಕ ಪುಸ್ತಕವನ್ನು ಹಾಗೂ ವ್ಯವಹಾರಕ್ಕೆ ಪ್ರತ್ಯೇಕ ಪುಸ್ತಕ ನಿರ್ವಹಿಸುತ್ತಾ ವಿವಿಧ ಸಂಘಗಳಲ್ಲಿ ಒಟ್ಟು 23,00,000/- ರೂ ಹಣವನ್ನು ದುರುಪಯೋಗ ಮಾಡಿಕೊಂಡು ಸಂಘ ಮತ್ತು ಸದಸ್ಯರಿಗೆ ನಂಬಿಕೆ ದ್ರೋಹ ಬಗೆದು ಮೋಸ ವಂಚನೆ ಮಾಡಿದ ಬಗ್ಗೆ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 39/2026 ಕಲಂ:316(4), 318, 336(3), 340(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.