Home Crime ಬ್ರಹ್ಮಾವರ : ಅಕ್ರಮ‌ ಮರಳು ಸಾಗಾಟ : ಮರಳು ಸಹಿತ‌ ವಾಹನ ವಶಕ್ಕೆ….!!

ಬ್ರಹ್ಮಾವರ : ಅಕ್ರಮ‌ ಮರಳು ಸಾಗಾಟ : ಮರಳು ಸಹಿತ‌ ವಾಹನ ವಶಕ್ಕೆ….!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಅಕ್ರಮವಾಗಿ ಪಿಕ್ ಅಪ್ ವಾಹನದಲ್ಲಿ ಮರಳು ಸಾಗಾಟ ನಡೆಸುತ್ತಿರುವಾಗ ಪೊಲೀಸರು ಮರಳು ಸಹಿತ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ : ದಿನಾಂಕ 21/09/2025 ರಂದು ಜಯಕುಮಾರ್, ಎಎಸ್‌ಐ, ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಪೆಜಮಂಗೂರು ಗ್ರಾಮದ ಬೆನಗಲ್ ಬ್ರಿಡ್ಜ್‌ ಕೆಳಗೆ ಬೆನಗಲ್ ಹೊಳೆಯಲ್ಲಿ ಮರಳನ್ನು ಕಳ್ಳತನ ಮಾಡಿ ಪಿಕ್‌ ಅಪ್ ವಾಹನಕ್ಕೆ ಲೋಡ್‌ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ ಪೆಜಮಂಗೂರು ಗ್ರಾಮದ ಬೆನಗಲ್ ಸೇತುವೆ ಬಳಿ ಹೋದಾಗ ಸ್ಥಳದಲ್ಲಿ ಒಬ್ಬಾತ ಹೊಳೆಯಿಂದ ಮರಳನ್ನು ತೆಗೆದು ಪಕ್ಕದಲ್ಲಿ ನಿಲ್ಲಿಸಿದ್ದ KA-18-A-8636 ನೇ ಮಹೀಂದ್ರಾ ಪಿಕ್‌ಅಪ್ ವಾಹನದಲ್ಲಿ ಮರಳನ್ನು ತುಂಬಿಸಿಕೊಂಡು ಹೊರಡುವ ತಯಾರಿಯಲ್ಲಿದ್ದು, ಆತನಲ್ಲಿ ಮರಳನ್ನು ಹೊಳೆಯಿಂದ ತೆಗೆಯಲು ಮತ್ತು ಮಾರಾಟ ಮಾಡಲು ಪರವಾನಿಗೆ ಇರುವ ಬಗ್ಗೆ ವಿಚಾರಿಸಿದಾದ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ವಾಹನದಲ್ಲಿ ಮರಳು ತುಂಬಿದ 20 ಸಿಮೆಂಟ್‌ ಚೀಲ ವಶಕ್ಕೆ ಪಡೆದಿದ್ದು ಆರೋಪಿತ ಗೋಪಾಲ ಯಾವುದೇ ಪರವಾನಿಗೆ ಹೊಂದದೇ, ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿಸದೇ ಹೊಳೆಯಿಂದ ಸರಕಾರದ ಸೊತ್ತಾದ ಮರಳನ್ನು ಕಳ್ಳತನದಿಂದ ತೆಗೆದು ಆ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಿರುವುದಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 197/2025 ಕಲಂ: 4(1), 4(1A), 21(1) (2) MMRD ACT AND US 3(1), 42(1), 44 KMMC RULE 1944 AND US 303(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.