Home Crime ಉಡುಪಿಯಲ್ಲಿ ಸಿ.ಎನ್‌.ಜಿ ಗ್ಯಾಸ್ ಡೀಲರ್ ಶಿಪ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ…!!

ಉಡುಪಿಯಲ್ಲಿ ಸಿ.ಎನ್‌.ಜಿ ಗ್ಯಾಸ್ ಡೀಲರ್ ಶಿಪ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ…!!

ಉಡುಪಿ : ಸಿ.ಎನ್‌.ಜಿ ಗ್ಯಾಸ್ ಡೀಲರ್ ಶಿಪ್ ಹೆಸರಿನಲ್ಲಿ ಉಡುಪಿಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.

ಸಂತೆಕಟ್ಟೆಯ ತೇಜಸ್ವಿನಿ ಅವರು ಸೆ.11ರಂದು petrol pumpdelearship.co.in ವೆಬ್ ಸೈಟ್‌ನಲ್ಲಿ ಸಿ.ಎನ್‌.ಜಿ. ಗ್ಯಾಸ್ ಡೀಲರ್ ಶಿಪ್‌ಗೆ ಅರ್ಜಿ ಸಲ್ಲಿಸಿದ್ದರು.

ಸೆ.18ರಂದು ಮಹೇಶ್. ಜೈನ್ ಎಂಬವರು ಕರೆಮಾಡಿ ತಾನು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್‌ನ ಸಂಸ್ಥೆಯವರೆಂದು ನಂಬಿಸಿ ಸಿ.ಎನ್.ಜಿ. ಗ್ಯಾಸ್ ಡೀಲರ್ ಶಿಪ್‌ಗೆ ಸಲ್ಲಿಸಿದ ಅರ್ಜಿ ಪುರಸ್ಕಾರಗೊಂಡಿದೆ. ಅದಕ್ಕೆ ಸಂಬಂಧಪಟ್ಟಂತೆ ಪೂರಕ ದಾಖಲಾತಿಯನ್ನು ಸಲ್ಲಿಸಿ ಎಂದು ಇ.ಮೇಲ್ ಐಡಿ support@ adanicng.com ನ್ನು ಕಳುಹಿಸಿದ್ದರು.

ಅದೇ ದಿನ ಇ-ಮೇಲ್ ಐಡಿ ಮೂಲಕ ಅರ್ಜಿಯ ಪ್ರತಿಯನ್ನು ತೇಜಸ್ವಿನಿ ಅವರ ಇ-ಮೇಲ್ ಐಡಿಗೆ ಕಳುಹಿಸಿಕೊಟ್ಟಿದ್ದು, ಅದರೊಂದಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾತೆ 5851213174 ಗೆ 49,500ರೂ. ನೆಫ್ಟ್ ಮಾಡುವಂತೆ ತಿಳಿಸಿದ್ದರು.

ಅದರಂತೆ ತೇಜಸ್ವಿನಿ ಅವರು ನೆಫ್ಟ್ ಮಾಡಿದ್ದರು. ಅನಂತರ ರಾಕೇಶ್ ವರ್ಮ ಎಂಬವರು ಕರೆ ಮಾಡಿ ತಿಳಿಸಿದಂತೆ ತೇಜಸ್ವಿನಿ ಅವರು ಹಂತ ಹಂತವಾಗಿ 7,99,500 ರೂ. ಗಳನ್ನು ಆರೋಪಿಗಳು ತಿಳಿಸಿದ ಖಾತೆಗೆ ವರ್ಗಾವಣೆ ಮಾಡಿದ್ದರು. ಈ ಮೂಲಕ ಆರೋಪಿಗಳು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆಯವರು ಎಂದು ನಂಬಿಸಿ ಸಿ.ಎನ್.ಜಿ. ಗ್ಯಾಸ್ ಡೀಲರ್ ಶಿಪ್ ಮಾಡಿಕೊಡುತ್ತೇವೆ ಎಂದು ನಂಬಿಸಿ ಗ್ಯಾಸ್ ಡೀಲರ್‌ಶಿಪ್ ಒದಗಿಸದೆ ವಂಚಿಸಿದ್ದಾರೆ.

ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.