ಬೆಂಗಳೂರು : ಸತ್ಯ ಸಾಯಿ ಗ್ರಾಮ, ಮುದ್ದೇನಹಳ್ಳಿ | 20 ನೇ ಸೆಪ್ಟೆಂಬರ್ 2025: ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯಲ್ಲಿ ನಡೆಯುತ್ತಿರುವ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದಲ್ಲಿ ಸಂಸ್ಕೃತಿ, ಕಲೆ ಹಾಗೂ ಕರುಣೆಯ ಅದ್ಭುತ ಅಲೆಯು ಎಲ್ಲರನ್ನೂ ಒಗ್ಗೂಡಿಸುತ್ತಿದೆ. ಹಲವು ಕಾರಣಗಳಿಂದಾಗಿ ಜಗತ್ತು ವಿಭಜನೆಯಾಗುತ್ತಿರುವ ಈ ಸಂದರ್ಭದಲ್ಲಿ ಆಯೋಜನೆಯಾಗಿರುವ ಈ ವಿಶಿಷ್ಟ ಉತ್ಸವವು ವಿಶ್ವದ ಹಲವು ದೇಶಗಳ ಸಂಸ್ಕೃತಿ, ಕಲೆ ಮತ್ತು ಸಹಾನುಭೂತಿಯ ಅದ್ಭುತ ಅಲೆಗಳನ್ನು ಆಕರ್ಷಿಸುತ್ತಿದೆ. ವೈವಿಧ್ಯಮಯ ಚಿಂತನೆಗಳನ್ನು ಪ್ರೀತಿಯ ತಳಹದಿಯಲ್ಲಿ ಹೆಣೆಯುತ್ತಿದೆ. ಹಬ್ಬವು ಜಗತ್ತಿನ ಮೂಲೆಮೂಲೆಯಲ್ಲಿರುವ ಕಲೆ, ಸಂಪ್ರದಾಯ, ಬುದ್ಧಿವಂತಿಕೆ ಮತ್ತು ಸೇವಾ ಮನೋಭಾವವನ್ನು ಒಂದೇ ಸೂರಿನಡಿ ಒಂದುಗೂಡಿಸುವ ಮೂಲಕ ಸಮಸ್ತ ಮಾನವ ಕೋಟಿಯೂ ಒಂದೇ ಕುಟುಂಬ ಎಂದು ಸಾರಿ ಹೇಳುತ್ತಿದೆ. ಆಗಸ್ಟ್ 16 ರಿಂದ ನವೆಂಬರ್ 23 ರವರೆಗೆ ನಡೆಯಲಿರುವ ಈ ಅಭೂತಪೂರ್ವ ಕಾರ್ಯಕ್ರಮವು ವಿವಿಧತೆಯಲ್ಲಿ ಏಕತೆಯನ್ನು ಸಾರಿಹೇಳುವ ಪ್ರಯತ್ನಕ್ಕೆ ದಾರಿದೀಪವಾಗಿದೆ.
100 ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ‘ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನ’ವು ಆಯೋಜಿಸಿರುವ ಈ ಉತ್ಸವವು ವಿಶ್ವದ ಪ್ರಮುಖ ಆಧ್ಯಾತ್ಮಿಕ ನಾಯಕರು, ಮಾನವತಾವಾದಿಗಳು, ಗಣ್ಯರು, ಕಲಾವಿದರು ಮತ್ತು ಪ್ರೇಕ್ಷಕರು ‘ಒಂದು ಜಗತ್ತು, ಒಂದು ಕುಟುಂಬ’ ಎಂದು ಒಟ್ಟುಗೂಡುವ ಮಹತ್ವದ ಸಂದರ್ಭಕ್ಕೆ ಸಾಕ್ಷಿಯಾಗುತ್ತಿದೆ.
ಲೆಬನಾನ್, ಜಪಾನ್, ಸೌದಿ ಅರೇಬಿಯಾ ಮತ್ತು ಉತ್ತರ ಮೆಸಿಡೋನಿಯಾದ ಖ್ಯಾತ ಆಧ್ಯಾತ್ಮಿಕ ನಾಯಕರು ಉತ್ಸವದಲ್ಲಿ ಸಾರ್ವಕಾಲಿಕ ಚಿಂತನೆಯನ್ನು ಹಂಚಿಕೊಂಡರು. ಅವರ ಮಾತುಗಳು ನೆರೆದಿದ್ದವರ ಬುದ್ಧಿ-ಭಾವಗಳನ್ನು ಪ್ರಚೋದಿಸುವಂತಿತ್ತು. ಈ ಪೈಕಿ “ಷರತ್ತುಗಳಿಲ್ಲದ ಪ್ರೀತಿ ಮತ್ತು ನಿರೀಕ್ಷೆಯಿಲ್ಲದ ಸೇವೆ” ಮತ್ತು “ಕರುಣೆ ಮತ್ತು ದಯೆಯಿಂದ ಕೂಡಿದ ಯಾವುದೇ ಕೆಲಸವು, ಅದೆಷ್ಟೇ ಸಣ್ಣದಾಗಿದ್ದರೂ ಬಹಳ ಮುಖ್ಯ. ನಾವು ಪರಸ್ಪರ ಅಪರಿಚಿತರಲ್ಲ. ಒಂದು ಜಗತ್ತಿನಲ್ಲಿರುವ ಒಂದೇ ಕುಟುಂಬದ ಭಾಗ” ಎನ್ನುವ ಮಾತುಗಳು ಉತ್ಸವದಲ್ಲಿ ಪ್ರತಿಧ್ವನಿಸಿತು. ನಮ್ಮ ನಡುವಿನ ವ್ಯತ್ಯಾಸಗಳನ್ನು ತಡೆಗೋಡೆಗಳಾಗಿ ನೋಡದೇ, ಜಗತ್ತನ್ನು ಒಗ್ಗೂಡಿಸುವ ಅಮೂಲ್ಯ ಉಡುಗೊರೆಯಾಗಿ ನೋಡಬೇಕು. ನಮ್ಮ ಮನೋಭಾವ ಈ ರೀತಿಯಾಗಿ ರೂಪುಗೊಂಡರೆ ಜಗತ್ತನ್ನು ಒಗ್ಗೂಡಿಸುವ ಆಶಯ ಸಾಕಾರವಾಗಲಿದೆ ಎನ್ನುವ ಭಾವನೆ ಮೂಡಲೂ ಉತ್ಸವವು ಒಂದು ವೇದಿಕೆಯಾಯಿತು.
ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ರಾಜಮನೆತನದ ಸದಸ್ಯ ಶೇಖ್ ಹುಮೈದ್ ಬಿನ್ ಅಬ್ದುಲ್ಲಾ ಅಲ್ ಮುಅಲ್ಲಾ ಸೇರಿದಂತೆ ಹಲವು ಗಣ್ಯರನ್ನು ಉತ್ಸವವು ಆಕರ್ಷಿಸಿತು. ಭಾರತದಲ್ಲಿರುವ ಜೋರ್ಡಾನ್‌ನ ರಾಯಭಾರಿ ಯೂಸೆಫ್ ಮುಸ್ತಫಾ ಅಲಿ ಅಬ್ದೆಲ್ ಘನಿ, ಭಾರತಕ್ಕೆ ಬುರುಂಡಿ ಗಣರಾಜ್ಯದ ರಾಯಭಾರಿ ಅಲೋಯ್ಸ್ ಬಿಜಿಂದವಿ, ದಕ್ಷಿಣ ಆಫ್ರಿಕಾಕ್ಕೆ ಬುರುಂಡಿ ಗಣರಾಜ್ಯದ ರಾಯಭಾರಿ ಅಲೆಕ್ಸಿಸ್ ಬುಕುರು ಸೇರಿದಂತೆ ಹಲವು ಗಣ್ಯರು ಉತ್ಸವದಲ್ಲಿ ಪಾಲ್ಗೊಂಡು ಶಾಂತಿ ಸಂದೇಶ ಹರಡಿದರು. ಉತ್ಸವವು ಜಾಗತಿಕ ಸಂವಾದ, ಸಾಮರಸ್ಯಕ್ಕೆ ಪ್ರಬಲ ವೇದಿಕೆ ಎಂದು ಗಣ್ಯರು ಶ್ಲಾಘಿಸಿದರು. ವಿಶ್ವದ ದೊಡ್ಡ ಸವಾಲುಗಳನ್ನು ಎದುರಿಸುವ ಜವಾಬ್ದಾರಿಯನ್ನು ಹಂಚಿಕೊಳ್ಳುವ ಭರವಸೆ ನೀಡಿದರು.
ಉತ್ಸವದ ವೇದಿಕೆಯಲ್ಲಿ ವಿಶ್ವದ ಹಲವು ಸಂಸ್ಕೃತಿಗಳು ಜೀವ ತಳೆದವು. ವಿವಿಧ ದೇಶಗಳ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಚಯಿಸುವ ಆಕರ್ಷಕ ಪ್ರದರ್ಶನಗಳನ್ನು ಕಲಾವಿದರು ನೀಡಿದರು. ಲೆಬನಾನ್ ಕಲಾವಿದರ ‘ಲವ್ ಈಸ್ ಮೈ ಐಡೆಂಟಿಟಿ’ (ಪ್ರೀತಿಯೇ ನನ್ನ ಗುರುತು) ಸಂಗೀತ ಕಾರ್ಯಕ್ರಮ, ದಕ್ಷಿಣ ಆಫ್ರಿಕಾ ಕಲಾವಿದರು ‘13 ವಾಯ್ಸಸ್’, ಬುರುಂಡಿಯ ರಾಯಲ್ ಡ್ರಮ್ ಪ್ರದರ್ಶನ, ಟ್ರಿನಿಡಾಡ್ ಮತ್ತು ಟೊಬಾಗೋ ದೇಶದ ಕಲಾವಿದರು ನೀಡಿದ ಸೋಕಾ ರಿದಮ್ ಪ್ರದರ್ಶನ, ಜಿಂಬಾಬ್ವೆಯ ಪಾರಂಪರಿಕ ನೃತ್ಯಗಳು, ಜರ್ಮನಿ ಮತ್ತು ಗ್ರೀಸ್ ಕಲಾವಿದರ ಮಾಧುರ್ಯ ತುಂಬಿದ್ದ ಸಂಗೀತ ಪ್ರದರ್ಶನ, ಜಪಾನ್‌ನ “ಸ್ಪಿರಿಟ್ ಆಫ್ ಪ್ರೇಯರ್”, ಜೋರ್ಡಾನ್‌ನ ‘ಲೈವ್‌ಲಿ ಡಬ್‌ಕೆ’, ರಷ್ಯಾದ ಬ್ಯಾಲೆ ಪ್ರದರ್ಶನಗಳು ಎಲ್ಲರ ಗಮನ ಸೆಳೆದವು. ಪ್ರೀತಿಯು ಎಲ್ಲ ಗಡಿಗಳನ್ನೂ ದಾಟಿದಾಗ, ಮಾನವೀಯತೆಯು ಬೆಳಗುತ್ತದೆ ಎನ್ನುವುದನ್ನು ಈ ವೈವಿಧ್ಯಮಯ ಕಲಾ ಪ್ರದರ್ಶನಗಳು ಸಂಗೀತ, ನೃತ್ಯದ ಮೂಲಕ ಸಾಕಾರಗೊಳಿಸಿದವು.
ಸಾಂಸ್ಕೃತಿಕ ಪ್ರದರ್ಶನಗಳಿಗಷ್ಟೇ ಉತ್ಸವವು ಸೀಮಿತವಾಗಿಲ್ಲ. ಅದರಿಂದಾಚೆಗೆ ಉತ್ಸವವು ನಿಸ್ವಾರ್ಥ ಸೇವೆಯ ಮನೋಭಾವವನ್ನು ಸಾದರಪಡಿಸಿತು. ‘ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನ’ವು (ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್) ಜೀವ ರಕ್ಷಕ ಪೋಷಣೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. ವಿಶ್ವದಾದ್ಯಂತ ಹಲವೆಡೆ ಜನರಿಗೆ ಈ ಸೇವೆಗಳನ್ನು ಉಚಿತವಾಗಿ, ಅತ್ಯಂತ ಪ್ರೀತಿ ಮತ್ತು ಸಹಾನುಭೂತಿಯಿಂದ ಒದಗಿಸಲಾಗುತ್ತಿದೆ. ಪ್ರೀತಿಯುಕ್ತ ಸೇವೆ ಎನ್ನುವುದು ಕೇವಲ ಮಾತಿಗಷ್ಟೇ ಸೀಮಿತವಲ್ಲ. ಅದು ಆಚರಣೆಯಲ್ಲಿರುವ ಕ್ರಿಯೆ ಎನ್ನುವುದನ್ನು ಅಭಿಯಾನವು ತನ್ನ ಕೆಲಸಗಳ ಮೂಲಕ ತೋರಿಸಿಕೊಡುತ್ತಿದೆ.
ಸಮಾಜದ ಬಗ್ಗೆ ಸಂಸ್ಥೆಯು ಅತ್ಯಂತ ಪ್ರೀತಿಯಿಂದ ನಿರ್ವಹಿಸುತ್ತಿರುವ ಕೆಲಸಗಳಲ್ಲಿ ಶಸ್ತ್ರಚಿಕಿತ್ಸೆಗಳು, ಔಷಧಿಗಳು, ಚಿಕಿತ್ಸೆ, ಆಪ್ತಸಮಾಲೋಚನೆ, ನಡೆದಾಡಲು ಬೇಕಾಗುವ ಉಪಕರಣಗಳು, ನವಜಾತ ಶಿಶು ಆರೈಕೆ ಉಪಕರಣಗಳು, ವಯೋವೃದ್ಧರ ಸುಸ್ಥಿರ ಆರೈಕೆ, ಸಿದ್ಧ ಊಟದ ವಿತರಣೆ, ಪಡಿತರ್ ಕಿಟ್, ಮಾಸಿಕ ಆಹಾರ ಕಿಟ್‌ಗಳು, ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಶುಲ್ಕದ ಬೆಂಬಲ, ಶಾಲೆಗಳಿಗೆ ಅಗತ್ಯವಿರುವ ಉಪಕರಣಗಳ ಸರಬರಾಜು, ಸಮವಸ್ತ್ರಗಳ ಪೂರೈಕೆ, ಮೌಲ್ಯಾಧಾರಿತ ಶಿಕ್ಷಣ, ಡೇ ಕೇರ್ ಬೆಂಬಲ, ಸಾಮುದಾಯಿಕ ರಕ್ತದಾನ ಸೇವೆಗಳು ಸಹ ಸೇರಿವೆ.
ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಂಗೀತ-ಲಲಿತಕಲೆಗಳು ಮತ್ತು ಕಾರ್ಪೊರೇಟ್ ಆಡಳಿತ ಕ್ಷೇತ್ರಗಳಲ್ಲಿ ಮಹೋನ್ನತ ಕೊಡುಗೆ ಕೊಟ್ಟ ಮಾನವತಾವಾದಿಗಳನ್ನು ಉತ್ಸವದಲ್ಲಿ ಗೌರವಿಸಲಾಯಿತು. ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರಾದ ಕಗಾಲೆಮಾ ಮೊಟ್ಲಾಂಥೆ ಅವರಿಗೆ ಪ್ರತಿಷ್ಠಿತ ‘ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಎಲ್ಲರಿಗಾಗಿ ಉತ್ತಮ ಜಗತ್ತು ರೂಪಿಸಲೆಂದು ಶ್ರಮಿಸಿದ ಜಾಗತಿಕ ನಾಯಕರನ್ನು ಉತ್ಸವವು ಅವರ ದೃಷ್ಟಿಕೋನ, ಹೊಸರೀತಿಯ ಆಲೋಚನೆ ಮತ್ತು ಸಂಕೀರ್ಣ ಸವಾಲುಗಳನ್ನು ಎದುರಿಸಿದ ಬದ್ಧತೆಗಾಗಿ ಗೌರವಿಸಿತು.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಪ್ರತಿದಿನ ನಡೆಸಿಕೊಡುತ್ತಿರುವ ‘ಅಷ್ಟಾವಕ್ರಗೀತೆ’ ಉಪನ್ಯಾಸ ಸರಣಿಯು ಸಭಿಕರನ್ನು ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ಮುನ್ನಡೆಸಿತು. ವೈವಿಧ್ಯತೆಯಿಂದ ದೈವತ್ವದ ಕಡೆಗೆ ಪಯಣಿಸಲು ಪ್ರೇರಣೆ ನೀಡಿತು. “ನಕಾರಾತ್ಮಕತೆಯನ್ನು (ನೆಗೆಟಿವಿಟಿ) ಹೀರಿಕೊಳ್ಳಬೇಡಿ; ಅದಕ್ಕೆ ಹೊಂದಿಕೊಳ್ಳಬೇಡಿ. ನಿಮ್ಮ ಶಕ್ತಿಯನ್ನು ರಕ್ಷಿಸಿಕೊಳ್ಳಿ, ಪ್ರೀತಿಯೇ ನಿಮಗೆ ಮಾರ್ಗದರ್ಶನ ಮಾಡಲಿ. ನಿಮ್ಮ ಶಾಂತಿಯನ್ನು ಕಾಪಾಡಿಕೊಂಡರೆ ಅದೇ ನಿಮ್ಮ ನಿಜವಾದ ಶಕ್ತಿಯಾಗುತ್ತದೆ” ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ತಮ್ಮ ಪ್ರವಚನ ಒಂದರಲ್ಲಿ ತಿಳಿಸಿದರು. ತಕ್ಷಣದ ಪ್ರಚೋದನೆಗಳಿಗೆ ಬಲಿಯಾಗದೆ ಶಿಸ್ತು ಅಳವಡಿಸಿಕೊಳ್ಳಬೇಕು, ವಿವೇಚನೆ ಬಳಸಬೇಕು ಎಂದು ಅವರು ಎಲ್ಲರಿಗೂ ಹಿತನುಡಿಗಳನ್ನು ತಿಳಿಸಿದರು. ಉನ್ನತ ಬುದ್ಧಿವಂತಿಕೆಯು (ದೈವಿಕ ಶಕ್ತಿ) ತಮ್ಮ ಕಾರ್ಯಗಳನ್ನು ಮುನ್ನಡೆಸಲು ಮತ್ತು ಮಾರ್ಗದರ್ಶನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ಮಾಡಿದರು.
‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ ಭಾಗವಾಗಿ ಸನಾತನ ಧರ್ಮದ ಮೇಲ್ಮೆ ಸಾರುವ ಭಾರತದ ಪ್ರಮುಖ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಯಿತು. ಧರ್ಮ (ಕರ್ತವ್ಯ) ಮತ್ತು ಕರ್ಮ (ಕಾರಣ ಮತ್ತು ಪರಿಣಾಮಗಳ ನಿಯಮ) ಮತ್ತು ವಸುಧೈವ ಕುಟುಂಬಕಂ ಆಶಯವನ್ನು ಈ ಹಬ್ಬಗಳು ಮಾನವೀಯ ಆಯಾಮದಲ್ಲಿ ಅರ್ಥೈಸಿಕೊಳ್ಳಲು ನೆರವಾಗುತ್ತವೆ.
ಸತ್ಯಸಾಯಿ ಗ್ರಾಮದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ನಡೆಯುವ ನವರಾತ್ರಿ ಮತ್ತು ಅತಿ ರುದ್ರ ಮಹಾ ಯಾಗದ ಆಚರಣೆಗಳು ಸನಾತನ ಧರ್ಮದ ಮಹೋನ್ನತ ಆಶಯಗಳನ್ನು ಆಳವಾದ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಅಭಿವ್ಯಕ್ತಿಸಲಿವೆ.
‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ 2025’ ಎನ್ನುವುದು ಮಾನವೀಯತೆ ಮತ್ತು ಆಧ್ಯಾತ್ಮಿಕತೆಯು ಶುದ್ಧ ಉದ್ದೇಶ ಮತ್ತು ನಿಸ್ವಾರ್ಥ ಪ್ರೀತಿಯೊಂದಿಗೆ ಒಗ್ಗೂಡಿದರೆ ಏನೆಲ್ಲಾ ಸಾಧ್ಯ ಎನ್ನುವುದು ಸಾರಿ ಹೇಳುವ ಜೀವಮಾನದಲ್ಲಿ ಒಮ್ಮೆ ಮಾತ್ರ ಕಾಣಸಿಗುವ ಅಪರೂಪದ ಆಚರಣೆಯಾಗಿದೆ. ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಮುಕ್ತ ಆಹ್ವಾನವಿದೆ.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಡಿ.ವಿ. ಸದಾನಂದ ಗೌಡ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಸಂಗೀತಕ್ಕೆ ಮಿಗಿಲಾದದ್ದು: ಬುರುಂಡಿ ದೇಶದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಸ್ತುತಿ
‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದಲ್ಲಿ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಸ್ಮರಣಿಕೆ ನೀಡಿದರು.
ಸಲ್ಮಾ ಫೌಂಡೇಶನ್ ಮತ್ತು ಯುಎಇ ದೇಶದ ಅಜ್ಮಾನ್‌ನಲ್ಲಿರುವ ಇಂಡಿಯಾ ಅಸೋಷಿಯೇಷನ್‌ನ ಪೋಷಕ ಡಾ ಅಬ್ದುಲ್ ರೆಹಮಾನ್ ಸಾಲಿಮ್ ಅಲ್ಸುವೈದಿ ಅವರನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಅಭಿನಂದಿಸಿದರು.
ಲೆಬನಾನ್‌ನ ಸೂಫಿ ನೃತ್ಯವು ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದಲ್ಲಿ ಎಲ್ಲರ ಹೃದಯಗಳನ್ನು ಬೆಸೆಯಿತು.
ಗಮನಾರ್ಹ ಕೊಡುಗೆಗಳಿಂದ ಸೌದಿ ಅರೇಬಿಯಾ ರಾಜಮನೆತನವನ್ನು ಜಾಗತಿಕ ವೇದಿಕೆಗಳಲ್ಲಿ ಮುಂಚೂಣಿಗೆ ತಂದಿರುವ ಶ್ರೀ ಖಾಲಿದ್ ವಲೀದ್ ಅಲ್‌ಸವೈದನ್ ಅವರನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಗೌರವಿಸಿದರು.
‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದಲ್ಲಿ ಪಾಲ್ಗೊಂಡಿದ್ದ ಭಾರತದಲ್ಲಿರುವ ಜೋರ್ಡಾನ್‌ನ ಹಶೆಮೈಟ್ ಸಾಮ್ರಾಜ್ಯದ ರಾಯಭಾರಿ ಯೂಸೆಫ್ ಮುಸ್ತಫಾ ಅಲಿ ಅಬ್ದೆಲ್ ಘನಿ ಅವರೊಂದಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ.
‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಕೆಗಲೆಮಾ ಮೊಟ್ಲಾಂಥೆ ಅವರನ್ನು ಅವರ ಮಾನವೀಯ ಕೊಡುಗೆಗಳಿಗಾಗಿ ಸದ್ಗುರು ಶ್ರೀ ಮಧುಸೂದನ ಸಾಯಿ ಪುರಸ್ಕರಿಸಿದರು.
ರಷ್ಯಾದ ಪಾರಂಪರಿಕ ಬ್ಯಾಲೆ ನೃತ್ಯವು ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವ’ದ ಪ್ರೇಕ್ಷಕರನ್ನು ಆಕರ್ಷಿಸಿತು.
‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದಲ್ಲಿ ರಷ್ಯಾದ ಪಾರಂಪರಿಕ ನೃತ್ಯ
ಭಾರತದ ಬುರುಂಡಿ ಗಣರಾಜ್ಯದ ರಾಯಭಾರಿ ಅಲೋಯ್ಸ್ ಬಿಜಿಂದವಿ, ದಕ್ಷಿಣ ಆಫ್ರಿಕಾದ ಬುರುಂಡಿ ರಾಯಭಾರಿ ಅಲೆಕ್ಸಿಸ್ ಬುಕುರು ಅವರು ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದಲ್ಲಿ ಪಾಲ್ಗೊಂಡಿದ್ದರು. ಸದ್ಗುರು ಶ್ರೀ ಮಧುಸೂದನ ಸಾಯಿ ಚಿತ್ರದಲ್ಲಿದ್ದಾರೆ.



