ಉಡುಪಿ : ನಿರಂತರ್ ಉದ್ಯಾವರ ಸಂಘಟನೆಯ ಮೂರು ದಿನದ ಸಿನಿಮಾ ಉತ್ಸವದಲ್ಲಿ ನಗರದ ಕಲ್ಮಾಡಿ ಕೊಡವೂರಿನ ನಿವಾಸಿಯಾಗಿರುವ ಡಾ. ಜೊಯ್ಲಿಸ್ ನೊರೋನ್ಹಾ ರವರಿಗೆ ಇತ್ತೀಚಿಗೆ ಪ್ಯಾರಿಸ್ ನ ಈಸ್ಟ್ ಬ್ರಿಜ್ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಇನ್ ಹೆಲ್ತ್ ಕೇರ್ ಪದವಿ ಪಡೆದ ಹಿನ್ನೆಲೆಯಲ್ಲಿ ಗೌರವಿಸಿ, ಸನ್ಮಾನಿಸಲಾಯಿತು. ಡಾ. ಜೊಯ್ಲಿಸ್ ನೊರೋನ್ಹಾ ಅವರು ಕೈಗೊಂಡ ಡೈನಾಮಿಕ್ಸ್ ಆಫ್ ರಿಸ್ಕ್ & ಪ್ರೊಟೆಕ್ಟಿವ್ ಫ್ಯಾಕ್ಟರ್ಸ್ ಫಾರ್ ಅನ್ ರಿಜಿಸ್ಟರ್ಡ್ ಮೆಡಿಕೇಶನ್ ಇನ್ ದ ಯುಇಎ ಮಾರ್ಕೆಟ್ – ಚಾಲೆಂಜರ್ಸ್ ಅಂಡ್ ಸೊಲ್ಯೂಷನ್ಸ್ ಅಧ್ಯಯನ ವಿಷಯಕ್ಕೆ ಈ ಪದವಿ ಲಭಿಸಿದೆ.
ದಾನಿಗಳು, ಪರೋಪಕಾರಿಯೂ ಆಗಿರುವ ಇವರು ಉಡುಪಿಯ ಕಲ್ಮಾಡಿ-ಕೊಡವೂರಿನ ದಿ. ಹೆನ್ರಿ ಮತ್ತು ಡಯಾನ ನೊರೋನ್ಹಾ ದಂಪತಿಗಳ ಪುತ್ರಿ. ಉಡುಪಿ ನಗರಸಭೆಯ ಮಾಜಿ ಸದಸ್ಯ ಹೊರ್ಮಿಸ್ ಸಹಿತ ಸಂತೋಷ್ ಮತ್ತು ಹನೀಶ್ ಇವರ ಸಹೋದರಿ. ಪ್ರಸ್ತುತ ಇವರು ದುಬೈನ ಫಾರ್ಮಾಸ್ಯೂಟಿಕಲ್ಸ್ ಕಂಪನಿಯ ಕಮರ್ಷಿಯಲ್ ಸೇಲ್ಸ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಶೋಕ ಮಾತಾ ದೇವಾಲಯದ ಪ್ರಧಾನ ಧರ್ಮಗುರುಗಳಾದ ವo. ಚಾರ್ಲ್ಸ್ ಮಿನೇಜಸ್, ಹಾಸ್ಯ ನಟ ಮತ್ತು ದೈಜಿ ಓಲ್ಡ್ ಮಾಧ್ಯಮದ ಸ್ಥಾಪಕ ವಾಲ್ಟರ್ ನಂದಳಿಕೆ, ಸಾಮಾಜಿಕ ಚಿಂತಕ ಫಣಿರಾಜ್, ನಿರಂತರ್ ಉದ್ಯಾವರ ಅಧ್ಯಕ್ಷ ರೋಷನ್ ಕ್ರಾಸ್ಟೊ, ಕಾರ್ಯದರ್ಶಿ ಒಲಿವೀರ ಮತಾಯಸ್, ಕೋಶಾಧಿಕಾರಿ ಸುನಿಲ್ ಡಿಸೋಜಾ, ಪ್ರಮುಖರಾದ ಮೈಕಲ್ ಡಿಸೋಜಾ, ರೊನಾಲ್ಡ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗಳು.
