ಕುಂದಾಪುರ: ಇಲ್ಲಿನ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಸೆ. 22ರಿಂದ ಆರಂಭಗೊಂಡು ಅ.2ರ ವರೆಗೆ ಜರುಗಲಿರುವುದು.
ಸೆ.22 ರಂದು ಸಂಜೆ 6 ರಿಂದ ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನೆ, ರಾತ್ರಿ ಗಂಟೆ 7.30ಕ್ಕೆ ಕಲಶ ಸ್ಥಾಪನೆ, ಪ್ರಾರ್ಥನೆ, ಮಹಾಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ನಡೆಯಲಿದೆ.
ಸೆ.23 ರಿಂದ ಅ.1ರ ವರೆಗೆ ಪ್ರತಿದಿನ ಸಾಯಂಕಾಲ 6.30ಕ್ಕೆ ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 8 ರಿಂದ ಮಹಾಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ನಡೆಯಲಿರುವುದು.
ಸೆ. 25 ರಂದು ಸ್ವಾತಿ ನಕ್ಷತ್ರ ಪ್ರಯುಕ್ತ ಬೆಳಗ್ಗೆ 6 ಗಂಟೆಯಿಂದ “ಕದಿರು ಪೂಜೆ” ಹೊಸತು ಆಚರಣೆ ಪ್ರಯುಕ್ತ ಭಕ್ತಾದಿಗಳಿಗೆ ಕದಿರು ವಿತರಣೆ ನಡೆಯಲಿದೆ.
ಸೆ.30 ರಂದು ದುರ್ಗಾಷ್ಟಮಿ ಪ್ರಯುಕ್ತ ಬೆಳಿಗ್ಗೆ 8 ಗಂಟೆಗೆ ‘ಸಾಮೂಹಿಕ ಚಂಡಿಕಾ ಹೋಮ, ‘ಪೂರ್ಣಾಹುತಿ, ಪಲ್ಲಪೂಜೆ, ವಿಶೇಷ ಅಲಂಕಾರ ಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ಸೇವಾಕರ್ತರಿಂದ ಸಾರ್ವಜನಿಕ “ಮಹಾ ಅನ್ನ ಸಂತರ್ಪಣೆ” ಕಾರ್ಯಕ್ರಮ ನಡೆಯಲಿದೆ.
ಅ. 2 ರಂದು ವಿಜಯದಶಮಿ ಪ್ರಯುಕ್ತ ಸಂಜೆ 5.30ರಿಂದ ವಿಶೇಷ “ರಂಗಪೂಜೆ”ರಾತ್ರಿ ಗಂಟೆ 6.30ರ ಗೋಧೂಳಿ ಸುಮುಹೂರ್ತದಲ್ಲಿ ಶ್ರೀ ಮಹಾಕಾಳಿ
ಅಮ್ಮನವರ ಪುಷ್ಪಾಲಂಕೃತ ಪಲ್ಲಕ್ಕಿ ಉತ್ಸವದ ಪುರಮೆರವಣಿಗೆಯು
ಕುಂದಾಪುರ ಮುಖ್ಯ ರಸ್ತೆ ಮಾರ್ಗವಾಗಿ ಸಾಗಿ, ಪಾರಿಜಾತ ಸರ್ಕಲ್ ನಿಂದ ತಿರುಗಿ, ಖಾರ್ವಿ- ಮೇಲ್ಕೇರಿ ರಸ್ತೆಯಲ್ಲಿರುವ
ಶ್ರೀ ನಾಗಜಟ್ಟಿಗೇಶ್ವರ ದೇವಳಕ್ಕೆ ಹೋಗಿ ಅಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.

