Home Karavali Karnataka ಕನ್ನಡ ರಾಜ್ಯೋತ್ಸವದ ಅಂಗವಾಗಿ ಲಯನ್ಸ್, ಲಿಯೋ ಹಾಗೂ ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ ಗಾಯನ ಸ್ಪರ್ಧಾ ಕಾರ್ಯಕ್ರಮ…!!

ಕನ್ನಡ ರಾಜ್ಯೋತ್ಸವದ ಅಂಗವಾಗಿ ಲಯನ್ಸ್, ಲಿಯೋ ಹಾಗೂ ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ ಗಾಯನ ಸ್ಪರ್ಧಾ ಕಾರ್ಯಕ್ರಮ…!!

ಉಡುಪಿ : ಲಯನ್ಸ್‌ ಇಂಟ‌ರ್ ನ್ಯಾಷನಲ್ ಜಿಲ್ಲೆ 317 ಸಿ, ಲಯನ್ಸ್ ಕ್ಲಬ್ ಕಲ್ಯಾಣಪುರ, ಲಯನ್ಸ್ ಕ್ಲಬ್ ಮಣಿಪಾಲ, ಲಯನ್ಸ್ ಕ್ಲಬ್ ಪರ್ಕಳ, ಲಯನ್ಸ್ ಕ್ಲಬ್ ಸಂತೆಕಟ್ಟೆ, ಲಯನ್ಸ್ ಕ್ಲಬ್ ಉಡುಪಿ ಚೇತನ, ಲಯನ್ಸ್ ಕಪ್ಲಬ್ ಉಡುಪಿ ಸೌತ್, ಲಯನ್ಸ್ ಕ್ಲಬ್ ಉಡುಪಿ ಇವರ ಜಂಟಿ ಆಯೋಜನೆಯೊಂದಿಗೆ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಮಣಿಪಾಲ ಇವರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಲಯನ್ಸ್, ಲಿಯೋ ಹಾಗೂ ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ ಗಾಯನ ಸ್ಪರ್ಧಾ ಕಾರ್ಯಕ್ರಮ “ನನ್ನ ನಾಡು ನನ್ನ ಹಾಡು” ಸೀಸನ್ 2 ಅಜ್ಜರಕಾಡು ಟೌನ್‌ ಹಾಲ್‌ನಲ್ಲಿ ನಡೆಯಿತು.

ಸುಮಾರು  82 ಕ್ಕೂ ಹೆಚ್ಚು  ಪ್ರತಿಭಾನ್ವಿತ ಗಾಯಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಹಾಡುಗಳನ್ನು ಹಾಡಿ ಮನರಂಜಿಸಿದರು.

ಗಾಯನ ಸ್ಪರ್ಧೆಯಲ್ಲಿ 82 ಜನ ಸ್ಪರ್ಧಿಗಳು ಭಾಗವಹಿಸಿದ್ದರು .ಲಯನ್ಸ್ ವಿಭಾಗದ ಸ್ಪರ್ಧಾ ವಿಜೇತೆ ಡಾ. ವಿಶ್ವಲತಾ ಸತೀಶ್‌ ಅವರಿಗೆ ಗಾನ ಸಾಮ್ರಾಟ್ ಪ್ರಶಸ್ತಿ ಹಾಗೂ ಸಾರ್ವಜನಿಕರ ವಿಭಾಗದ ಸ್ಪರ್ಧಾ ವಿಜೇತೆ ಸಂಚಾಲಿ ಬಂಗೇರ ಇವರಿಗೆ ಗಾನ ಗಂಧರ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಲ್ಲಾ ಗವರ್ನರ್ ಸಪ್ನಾ ಸುರೇಶ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ಕಾರ್ಯಕ್ರಮ ಸಂಘಟಕ ನಂದಕಿಶೋ‌ರ್, ದುರ್ಗಾ ಮ್ಯೂಸಿಕ್ ಮೀಟ್ ಮಣಿಪಾಲ ಇದರ ತೇಜಸ್ವಿನಿ ಅನಿಲ್ ರಾಜ್, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಶಾಲಿನಿ ಬಂಗೇರಾ, ಲಯನ್ಸ್ ಜಿಲ್ಲಾ ಸಂಪುಟ ಕೋಶಾಧಿಕಾರಿ ಶಶಿಧರ್ ಶೆಟ್ಟಿ ಎರ್ಮಾಳು, ಲಯನ್ಸ್‌ ಜಿಲ್ಲಾ ಸಾಂಸ್ಕೃತಿಕ ಸಂಯೋಜಕ ರಂಜನ್ ಕಲ್ಕೂರ, ಲಯನ್ಸ್ ಕ್ಲಬ್‌ ಉಡುಪಿ ಇದರ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ, ಲಯನ್ಸ್ ಕ್ಲಬ್ ಮಣಿಪಾಲ ಇದರ ಅಧ್ಯಕ್ಷ ಡಾ. ನಿಶಾಂತ್ ಭಟ್ ಮೊದಲಾದವರು ಭಾಗವಹಿಸಿದ್ದರು.

ಪ್ರತಾಪ್‌ ಕುಮಾ‌ರ್ ಕಾರ್ಯಕ್ರಮ ನಿರೂಪಿಸಿದರು. ನಂದಕಿಶೋ‌ರ್ ಸ್ವಾಗತಿಸಿ, ಜ್ಯೋತಿ ಶೇಟ್ ಧನ್ಯವಾದ ಸಮರ್ಪಿಸಿದರು.