Home Crime ಮಲ್ಪೆ : ಬಾವಿಗೆ ಬಿದ್ದು ವ್ಯಕ್ತಿಯೋರ್ವರು ಮೃತ್ಯು…!!

ಮಲ್ಪೆ : ಬಾವಿಗೆ ಬಿದ್ದು ವ್ಯಕ್ತಿಯೋರ್ವರು ಮೃತ್ಯು…!!

ಮಲ್ಪೆ; ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಸಾವನ್ನಪ್ಪಿದವರು ನವೀನ್ ಎಂದು ತಿಳಿದು ಬಂದಿದೆ.

ಘಟನೆ ವಿವರ : ಪಿರ್ಯಾದಿ ರಾಜೇಶ ಕುಪ್ಪ ಮೆಂಡನ್‌ (46) ಮೂಡುತೋನ್ಸೆ ಗ್ರಾಮ, ಉಡುಪಿ ತಾಲೂಕು ಇವರ ತಮ್ಮ ನವೀನ ಪ್ರಾಯ: 44 ವರ್ಷ ರವರು ದಿನಾಂಕ: 25-08-2025 ರಂದು 13:30 ಗಂಟೆಗೆ ಪಿರ್ಯಾದಿದಾರರ ತಮ್ಮ ಮನೆಯಲ್ಲಿ ಇಲ್ಲದೇ ಇದ್ದು, ಅವನ ಬಗ್ಗೆ ಅವರ ಅಮ್ಮನಲ್ಲಿ ವಿಚಾರಿಸಿದಾಗ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿರುತ್ತಾನೆ, ಪಿರ್ಯಾದಿದಾರರು ಅಂಗಡಿಯ ಹತ್ತಿರ ನೋಡಿದಾಗ ಅಂಗಡಿ ಬಾಗಿಲು ಹಾಕಿರುತ್ತದೆ, ಸಂಶಯಗೊಂಡ ಪಿರ್ಯಾದಿದಾರರು ಅವರ ತಮ್ಮನನ್ನು ಹುಡುಕುತ್ತಾ ಮನೆಯ ಬಾವಿಯ ಹತ್ತಿರ ಹೋಗಿ ಬಾವಿಯಲ್ಲಿ ನೋಡಿದಾಗ ಪಿರ್ಯಾದಿದಾರರ ತಮ್ಮನ ಚಪ್ಪಲಿ ಬಾವಿಯ ನೀರಿನಲ್ಲಿ ತೇಲುತ್ತಿದ್ದು, ಈಶ್ವರ್‌ ಮಲ್ಪೆ ರವರಿಗೆ ಪೋನ್‌ ಮಾಡಿ ವಿಚಾರ ತಿಳಿಸಿದಾಗ ಈಶ್ವರ ಮಲ್ಪೆ ರವರು ಬಾವಿಯಲ್ಲಿ ಇಳಿದು ನೋಡಿದಾಗ ಬಾವಿಯಲ್ಲಿ ಸುಮಾರು 14:30 ಗಂಟೆಗೆ ಪಿರ್ಯಾದಿದಾರರ ತಮ್ಮನ ಮೃತ ದೇಹವು ಸಿಕ್ಕಿರುತ್ತದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 54/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.