ಮಣಿಪಾಲ: ಇಂದ್ರಾಳಿ ರೈಲು ನಿಲ್ದಾಣದ ಬಳಿ ಮೇ 21ರಂದು ಅನುಮಾನಾಸ್ಪದವಾಗಿ ನಿಂತಿದ್ದ ದಂಪತಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ರಮೇಶ ಬಂಡಿ ವಡ್ಡರ(45) ಹಾಗೂ ಆತನ ಪತ್ನಿ ಸುಧಾ(30) ಎಂದು ಗುರುತಿಸಲಾಗಿದೆ.
ರಮೇಶ್ ಕೈಯಲ್ಲಿ ಎರಡು ಮೊಬೈಲ್ ಇದ್ದು ಅದರಲ್ಲಿ ಒಂದು ಸಿಮ್ ಹಾಗೂ ಸುಧಾ ಕೈಯಲ್ಲಿ ಒಂದು ಮೊಬೈಲ್ ಇತ್ತು. ಈ ಬಗ್ಗೆ ಸಮರ್ಪಕ ಉತ್ತರ ನೀಡದೆ ಇರುವುದರಿಂದ ಪೊಲೀಸರು ಅನುಮಾನಗೊಂಡು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




