ಹೆಬ್ರಿ: ಅಡುಗೆ ಕೆಲಸಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಕೆಲಸ ಮುಗಿದ ಬಳಿಕ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ನಿವಾಸಿ ಉಮೇಶ (40) ಅವರೊಂದಿಗೆ ಅಡುಗೆ ಕೆಲಸ ಮಾಡುತ್ತಿದ್ದ ಪ್ರಭಾಕರ ಶೆಟ್ಟಿ (45) ಅವರು ಜುಲೈ 5ರಂದು ನಾರಾವಿಯ ಅರಸಿಕಟ್ಟೆಯಲ್ಲಿರುವ ರವಿರಾಜ್ ಜೈನ್ ಅವರ ಮನೆಗೆ ರೊಟ್ಟಿ ತಯಾರಿಸುವ ಕೆಲಸಕ್ಕಾಗಿ ತೆರಳಿದ್ದರು.
ಕೆಲಸ ಮುಗಿದ ಬಳಿಕ ಮಧ್ಯಾಹ್ನ ಸುಮಾರು 12:15 ಗಂಟೆಗೆ ನಾರಾವಿಯಿಂದ ಅವರು ಕಾಣೆಯಾಗಿದ್ದು, ಬಳಿಕ ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ದೊರೆತಿಲ್ಲ.
ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 33/2026ರಡಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.




