Home Latest ಯಾಂತ್ರಿಕತೆಯಿಂದ ಗ್ರಾಮೀಣ ಕೃಷಿಗೆ ಹೊಸದಿಕ್ಕು : ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅನಿಸಿಕೆ

ಯಾಂತ್ರಿಕತೆಯಿಂದ ಗ್ರಾಮೀಣ ಕೃಷಿಗೆ ಹೊಸದಿಕ್ಕು : ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅನಿಸಿಕೆ

ಉಡುಪಿ: ಉಡುಪಿ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ, ಸಮಯದ ಅಭಾವ, ಹೆಚ್ಚಿನ ವೆಚ್ಚ ಗಮನದಲ್ಲಿಟ್ಟು ಯಾಂತ್ರೀಕೃತ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗ್ರಾಮೀಣ ಕೃಷಿ ಕ್ಷೇತ್ರಕ್ಕೆ ಇದು ಹೊಸದಿಕ್ಕು ತೋರಲಿದೆ ಎಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

 

ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ, ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಮಗ್ರ ಕೃಷಿ ಸಮೂಹ (ಐಎಫ್ಸಿ) ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಆರಂಭವಾಗಿರುವ ಜೀವನೋಪಾಯ ಸೇವಾ ಕೇಂದ್ರ ಆರಂಭವಾಗಿದ್ದು, ಅಲೆವೂರು ನೋಡಲ್ ಜಿಪಿಎಲ್ಎಫ್ (ಗ್ರಾಪಂ ಮಟ್ಟದ ಒಕ್ಕೂಟ)ಗೆ ಕೃಷಿ ಯಂತ್ರೋಪಕರಣಗಳನ್ನು ಉಡುಪಿ ಜಿಪಂ ಕಚೇರಿ ಮುಂಭಾಗದಲ್ಲಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ (ಮೇ 16) ಹಸ್ತಾಂತರಿಸಿ ಮಾತನಾಡಿದರು.

 

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತೀಕ್ ಬಾಯಲ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಯೋಜನಾ ನಿರ್ದೇಶಕ ಡಾ. ಉದಯ ಶೆಟ್ಟಿ, ಉಡುಪಿ ತಾಪಂ ಇಒ ವಿಜಯಾ, ಎನ್ಆರ್ಎಲ್ಎಂ ಜಿಲ್ಲಾ ವ್ಯವಸ್ಥಾಪಕಿ (ಕೃಷಿ) ಡಾ. ಸೌಮ್ಯಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ನವ್ಯಾ, ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವ, ಎಂಕೆಪಿಸಿ ಸಿಇಒ ಶ್ರೀದೇವಿ, ಎನ್ಆರ್ ಎಲ್ಎಂ (ಕೃಷಿಯೇತರ) ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ಅಲೆವೂರು ಪಿಡಿಒ ಪ್ರವೀಣ್ ಡಿಸೋಜಾ, ಜಿಪಂ ಅಧೀಕ್ಷಕಿ ವಸಂತಿ, ಅಲೆವೂರು ನೋಡಲ್ ಜಿಪಿಎಲ್ಎಫ್ ಸಂಸ್ಥೆಯ ಕಸ್ತೂರಿ ನಾಯಕ್, ಶೋಭಾ ಆಚಾರ್ಯ, ಮಾಧವಿ ಶೆಟ್ಟಿ ಉಪಸ್ಥಿತರಿದ್ದರು.