Home Crime ಮಣಿಪಾಲದಲ್ಲಿ ಯುವಕನ ಮೇಲೆ ಹಲ್ಲೆ : ಪ್ರಕರಣ ದಾಖಲು…!!

ಮಣಿಪಾಲದಲ್ಲಿ ಯುವಕನ ಮೇಲೆ ಹಲ್ಲೆ : ಪ್ರಕರಣ ದಾಖಲು…!!

ಮಣಿಪಾಲ, ಮೇ 21: ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನೊಬ್ಬನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಚೂರಿಯಿಂದ ಚುಚ್ಚುವುದಾಗಿ ಬೆದರಿಕೆ ಹಾಕಿದ ಘಟನೆ ಮಣಿಪಾಲದಲ್ಲಿ ನಡೆದಿದೆ.

ದುರ್ಗಾ ನಗರ, ಇಂದ್ರಾಳಿ ನಿವಾಸಿ ಯಕ್ಷತ್ ಕುಮಾರ್ (20) ಅವರು ತಮ್ಮ ಸ್ನೇಹಿತ ಶ್ರೀಧರ ಅವರ  ಮೋಟಾರ್ ಸೈಕಲ್‌ನಲ್ಲಿ ಸಹಸವಾರನಾಗಿ ಇಂಡಸ್ಟ್ರಿಯಲ್ ಏರಿಯಾ ಕಡೆಗೆ ತೆರಳುತ್ತಿದ್ದರು. ಮಧ್ಯಾಹ್ನ ಸುಮಾರು 2:05ರ ವೇಳೆಗೆ ಮಣಿಪಾಲ ಜ್ಞಾನಸುಧಾ ಕಾಲೇಜು ಸಮೀಪ ಸಾಗುತ್ತಿದ್ದಾಗ, ಹಿಂಬದಿಯಿಂದ ನಾಯಿಯೊಂದು ಅಟ್ಟಿಸಿಕೊಂಡು ಬರುತ್ತಿದ್ದು ಅದನ್ನು ಗಮನಿಸುತ್ತಾ ಹೋಗುತ್ತಿದ್ದ ವೇಳೆ, ಸೈಕಲ್‌ನಲ್ಲಿ ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬನು ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಬಂದು ದಾರಿ ಅಡ್ಡಗಟ್ಟಿದ್ದಾನೆ ಎಂದು ದೂರಲಾಗಿದೆ.

ಈ ವೇಳೆ “ಯಾಕೆ ಗುರಾಯಿಸಿ ನೋಡುತ್ತಿದ್ದೀಯಾ” ಎಂದು ಬೈದು, ಕೈಯಿಂದ ಕೆನ್ನೆಗೆ ಹೊಡೆದು, ಚೂರಿ ಹಾಕಿ ಚುಚ್ಚಿ ಬಿಡುವುದಾಗಿ ಬೆದರಿಕೆ ಹಾಕಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.