Home Crime ಉಡುಪಿ : ಲಾರಿ ಹಾಗೂ ಬೈಕ್‌ ನಡುವೆ ಢಿಕ್ಕಿ : ಸವಾರ ಸಾವು….!!

ಉಡುಪಿ : ಲಾರಿ ಹಾಗೂ ಬೈಕ್‌ ನಡುವೆ ಢಿಕ್ಕಿ : ಸವಾರ ಸಾವು….!!

ಉಡುಪಿ: ನಗರದ ಸಮೀಪ ‌ಲಾರಿಯೊಂದು‌‌ ಬೈಕ್ ಗೆ ಢಿಕ್ಕಿ ಹೊಡೆದು ‌ಬೈಕ್ ಸವಾರ ಮೃತಪಟ್ಟ ಘಟನೆ ‌ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ಸುರೇಶ್ ಎಂದು ತಿಳಿಯಲಾಗಿದೆ.

ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ದಿನಾಂಕ 08/09/2025 ರಂದು ಸಂಜೆ 7:00 ಗಂಟೆಗೆ ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮ ಬಲಾಯಿಪಾದೆ ಜಂಕ್ಷನ್ ಬಳಿ ಹಾದುಹೋಗಿರುವ ಮಂಗಳೂರು-ಉಡುಪಿ ರಾಹೆ-66 ನೇ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ಜಗದೀಶ್ ಎಂಬಾತನು KA01AL9736 ನೇ ಲಾರಿಯನ್ನು ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಬಂದು ಅದೇ ರಸ್ತೆಯಲ್ಲಿ ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ಸುರೇಶ್ (43) ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20EA7955 ನೇ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸುರೇಶ್ ರವರು ಬೈಕ್‌ ಸಮೇತ ರಸ್ತೆಗೆ ಬಿದ್ದು, ತಲೆಗೆ ಗಂಬೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯಾಧಿಕಾರಿಯವರು ಸಾಯಾಂಕಾಲ 7:30 ಗಂಟೆಗೆ ಈಗಾಗಲೇ ಮೃತಪಟ್ಟಿರುವುದಾಗಿ ದೃಡೀಕರಿಸಿರುತ್ತಾರೆ.

ಈ ಬಗ್ಗೆ ರಾಜೇಶ್ (35)ಪೂಂದಾಡ್ ದರ್ಕಾಸು, ತೆಂಕ ಗ್ರಾಮ, ಎರ್ಮಾಳು ಅಂಚೆ, ಕಾಪು ತಾಲೂಕು ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣೆ ಅಪರಾಧ ಕ್ರಮಾಂಕ: 94/2025 281, 106(1) BNS- 2023 ರಂತೆ ಪ್ರಕರಣ ದಾಖಲಾಗಿರುತ್ತದೆ.