Home Crime ಪಿಲ್ಲರ್ ಹಾಕಲು ತೋಡಿದ್ದ ಗುಂಡಿಗೆ ಬಿದ್ದು 9 ವರ್ಷದ ಬಾಲಕ ದುರ್ಮರಣ…!!

ಪಿಲ್ಲರ್ ಹಾಕಲು ತೋಡಿದ್ದ ಗುಂಡಿಗೆ ಬಿದ್ದು 9 ವರ್ಷದ ಬಾಲಕ ದುರ್ಮರಣ…!!

ಹುಬ್ಬಳ್ಳಿ: ಪಿಲ್ಲರ್ ಹಾಕಲು ತೋಡಿದ್ದ ಗುಂಡಿಗೆ ಬಿದ್ದು 9 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ವಿಜಯನಗರದಲ್ಲಿ ನಡೆದಿದೆ.

ಹುಬ್ಬಳ್ಳಿಯ ಕೇಶ್ವಾಪುರದ ಆಜಾದ್ ನಗರ ನಿವಾಸಿ ಬಾಲಾಜಿ (9) ಮೃತ ಬಾಲಕ ಎಂದು ಗುರುತಿಸಲಾಗಿದೆ.

ಮೃತ ಬಾಲಕ ತನ್ನ ಸ್ನೇಹಿತರೊಂದಿಗೆ ಆಟ ಆಡವಾಡುತ್ತಾ ವಿಜಯನಗರಕ್ಕೆ ಬಂದಿದ್ದ. ಈ ವೇಳೆ ಕಾಂಪೌಂಡ್‌ವೊಂದರ ಒಳಗೆ ಬಿದ್ದಿದ್ದ ತೆಂಗಿನಕಾಯಿ ತೆಗೆದುಕೊಳ್ಳಲು ಮೃತ ಬಾಲಾಜಿ ಹೋಗಿದ್ದ. ಆಗ ಪಿಲ್ಲರ್ ಹಾಕಲು ತೋಡಿದ್ದ ಗುಂಡಿಗೆ ಬಿದ್ದಿದ್ದು, ಆಳಕ್ಕಿದ್ದರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಇನ್ನೂ ಬಾಲಕ ಗುಂಡಿಗೆ ಬೀಳುತ್ತಿದ್ದಂತೆ ಜೊತೆಗಿದ್ದ ಇಬ್ಬರು ಬಾಲಕರು ಹೆದರಿಕೊಂಡು ಪರಾರಿಯಾಗಿ, ನಡೆದ ವಿಷಯ ಯಾರಿಗೂ ಹೇಳದೇ ಸುಮ್ಮನಾಗಿದ್ದಾರೆ. ಇದರಿಂದ ವಿಷಯ ತಿಳಿಯದ ಪೋಷಕರು ಮಗ ನಾಪತ್ತೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಶವ ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.