Home Crime ಕೆಪಿಟಿ – ನಂತೂರು ಮಧ್ಯೆ ಹೆದ್ದಾರಿ ಹೊಂಡಕ್ಕೆ ಬಿದ್ದ ಸ್ಕೂಟರ್ ಸವಾರ ಪಲ್ಟಿ : ಬಸ್...

ಕೆಪಿಟಿ – ನಂತೂರು ಮಧ್ಯೆ ಹೆದ್ದಾರಿ ಹೊಂಡಕ್ಕೆ ಬಿದ್ದ ಸ್ಕೂಟರ್ ಸವಾರ ಪಲ್ಟಿ : ಬಸ್ ಚಾಲಕನ ಸಮಯಪ್ರಜ್ಞೆಯಿಂದ ಅಪಾಯದಿಂದ ಪಾರು…!!

ಮಂಗಳೂರು : ನಗರದ ಕೆಪಿಟಿ- ನಂತೂರು ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳು ದ್ವಿಚಕ್ರ ವಾಹನ ಸವಾರರ ಪಾಲಿಗೆ ಮರಣ ಗುಂಡಿಯಂತಾಗಿವೆ. ಶನಿವಾರ ರಾತ್ರಿ ಸ್ಕೂಟರ್ ಸವಾರನೊಬ್ಬ ನಂತೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದು ಪಲ್ಟಿಯಾಗಿದ್ದು ಹಿಂದೆ ಇದ್ದ ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಅದೃಷ್ಟವಶಾತ್ ಜೀವ ಉಳಿದಿದ್ದು ಅಪಾಯದಿಂದ ಪಾರಾಗಿದ್ದಾದೆ

ಕೆಪಿಟಿ ವೃತ್ತದಿಂದ ನಂತೂರು ಕಡೆಗೆ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಎದುರಿನ ವಾಹನವನ್ನು ಹಿಂದಿಕ್ಕಲೆಂದು ಸ್ಕೂಟರ್ ಸವಾರ ಒಮ್ಮೆಲೇ ವೇಗ ಪಡೆದಿದ್ದು ಅಷ್ಟರಲ್ಲೇ ರಸ್ತೆ ಗುಂಡಿಗೆ ಬಿದ್ದು ಸವಾರ ನೆಲಕ್ಕುರುಳಿದ್ದಾನೆ‌. ಇದೇ ವೇಳೆ ರಾಜಲಕ್ಷ್ಮಿ ಎನ್ನುವ ಹೆಸರಿನ ಖಾಸಗಿ ಬಸ್ ಹಿಂದಿನಿಂದ ಬರ್ತಿದ್ದು ಚಾಲಕ ಶಶಿಧರ್ ಶೆಟ್ಟಿ ಹಠಾತ್ ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿದ್ದಾರೆ. ಇದರಿಂದ ಸ್ಕೂಟರ್ ಸವಾರನ ಮೇಲೆ ಸಾಗಬೇಕಿದ್ದ ಬಸ್ ಅಲ್ಲಿಯೇ ನಿಂತು ಬಿಟ್ಟಿದೆ.‌ ಈ ಘಟನೆಯ ವಿಡಿಯೋ ಬಸ್ಸಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೇರಾವುದೇ ವಾಹನ ಆಗುತ್ತಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು ಎನ್ನೋದು ವಿಡಿಯೋ ನೋಡಿದರೆ ಗಮನಕ್ಕೆ ಬರುತ್ತದೆ. ‌ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕುವಂತಾಗಿದೆ.